ಶಿವಮೊಗ್ಗ: ತಾಲೂಕಿಗೆ ನೂತನವಾಗಿ ಬಂದ ತಹಶೀಲ್ದಾರ್ ನಾಗರಾಜ್ ಸಚಿವ ಕೆ.ಎಸ್.ಈಶ್ವರಪ್ಪನವರ ಕಾಲಿಗೆ ಬೀಳುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ.
ಸಚಿವ ಈಶ್ವರಪ್ಪ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ತಹಶೀಲ್ದಾರ್: ಸಾಮಾಜಿಕ ಅಂತರಕ್ಕೂ ನಿರ್ಲಕ್ಷ್ಯ - k s eeshwarappa
ಶಿವಮೊಗ್ಗದ ಕೆ.ಆರ್.ಪುರಂ ಬಡಾವಣೆಯಲ್ಲಿ ದಿನಸಿ ಕಿಟ್ ವಿತರಣೆ ಮಾಡಿ ವಾಪಸ್ ಆಗುವಾಗ ತಹಶೀಲ್ದಾರ್ ನಾಗರಾಜ್ ಸಚಿವ ಈಶ್ವರಪ್ಪ ಕಾಲಿಗೆ ಬಿದ್ದು ಆರ್ಶೀವಾದ ಪಡೆದರು.
eeshwarappa
ತಹಶೀಲ್ದಾರ್ ನಾಗರಾಜ್ ಅವರು ಕಳೆದ ತಿಂಗಳು ಜಿಲ್ಲೆಗೆ ವರ್ಗಾವಣೆಯಾಗಿದ್ದು, ನಿನ್ನೆ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಇವರು ಈ ಹಿಂದೆ ದಾವಣಗೆರೆಯ ಚನ್ನಗಿರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಕೆ.ಆರ್.ಪುರಂ ಬಡಾವಣೆಯಲ್ಲಿ ದಿನಸಿ ಕಿಟ್ ವಿತರಿಸಿ ಹಿಂತಿರುಗುವಾಗ ತಹಶೀಲ್ದಾರ್ ನಾಗರಾಜ್, ಸಚಿವರ ಕಾಲಿಗೆ ಬಿದ್ದರು. ಈ ವೇಳೆ ಸಚಿವರ ಬೆಂಬಲಿಗರು ಸಾಮಾಜಿಕ ಅಂತರವನ್ನು ಗಾಳಿಗೆ ತೂರಿದರು.