ಶಿವಮೊಗ್ಗ: ಜಿಲ್ಲೆಯಲ್ಲಿ ಬುಧವಾರ ವಿಚಿತ್ರ ಘಟನೆಯೊಂದು ನಡೆದಿದೆ. ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದ ವಿದ್ಯಾರ್ಥಿಯ ಕೈ ಅನ್ನು ಪರೀಕ್ಷಾ ಮೇಲ್ವಿಚಾರಕ ಕಚ್ಚಿರುವ ಘಟನೆ ಹೊಸನಗರದಲ್ಲಿ ನಡೆದಿದೆ. ಹೊಸನಗರದ ಕೊಡಚಾದ್ರಿ ಪದವಿ ಕಾಲೇಜಿನಲ್ಲಿ ನಿನ್ನೆ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಯು ನಕಲು ಮಾಡುತ್ತಿದ್ದನಂತೆ. ಇದನ್ನು ಪರೀಕ್ಷಾ ಮೇಲ್ವಿಚಾರಕ ಅಂಜನ್ ಕುಮಾರ್ ಗಮನಿಸಿದ್ದಾರೆ. ಆಗ ಆತನ ಬಳಿ ಹೋಗಿ ನಕಲು ಮಾಡಿದ್ದರ ಬಗ್ಗೆ ಪ್ರಶ್ನೆ ಮಾಡಿದ್ದಾರೆ.
ಶಿವಮೊಗ್ಗದಲ್ಲಿ ವಿಚಿತ್ರ ಘಟನೆ.. ಕಾಪಿ ಮಾಡುತ್ತಿದ್ದ ವಿದ್ಯಾರ್ಥಿಯ ಕೈ ಕಚ್ಚಿದ ಪರೀಕ್ಷಾ ಮೇಲ್ವಿಚಾರಕ!
ಹೊಸನಗರದ ಕೊಡಚಾದ್ರಿ ಪದವಿ ಕಾಲೇಜಿನಲ್ಲಿ ನಿನ್ನೆ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಯೋರ್ವ ನಕಲು ಮಾಡುತ್ತಿದ್ದ. ಇದನ್ನು ಪರೀಕ್ಷಾ ಮೇಲ್ವಿಚಾರಕ ಅಂಜನ್ ಕುಮಾರ್ ಗಮನಿಸಿದ್ದಾರೆ. ಆತನ ಬಳಿ ಹೋಗಿ ನಕಲು ಮಾಡಿದ್ದರ ಬಗ್ಗೆ ಪ್ರಶ್ನೆ ಮಾಡಿದ್ದಾರೆ.
ಇದಕ್ಕೆ ವಿದ್ಯಾರ್ಥಿ ಕುಪಿತಗೊಂಡು ಮೇಲ್ವಿಚಾರಕ ಅಂಜನ್ ಕುಮಾರ್ ಬಳಿ ವಾದ ಮಾಡಿದ್ದಾರೆ. ಇದರಿಂದ ಸಿಟ್ಟಿಗೆದ್ದ ಅಂಜನ್ ಕುಮಾರ್ ವಿದ್ಯಾರ್ಥಿಯ ಎಡಗೈ ಕಚ್ಚಿದ್ದಾರೆ. ತಕ್ಷಣ ವಿದ್ಯಾರ್ಥಿ ಹೊಸನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ. ಈ ಕುರಿತು ವಿದ್ಯಾರ್ಥಿ ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ. ನಂತರ ಹಿರಿಯರ ಮಧ್ಯಸ್ಥಿಕೆ ನಡೆಸಿ ಪೊಲೀಸ್ ಠಾಣೆಯಲ್ಲಿ ರಾಜಿ ನಡೆಸಿದ್ದು, ವಿದ್ಯಾರ್ಥಿಯು ತನ್ನ ದೂರನ್ನು ವಾಪಸ್ ಪಡೆದುಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಓದಿ:ಬಿಬಿಎಂಪಿ ಕಸದ ಲಾರಿಗೆ ಮತ್ತೊಂದು ಬಲಿ.. ಲಾರಿ ಹರಿದು ವೃದ್ಧನ ದೇಹ ಛಿದ್ರ ಛಿದ್ರ