ಕರ್ನಾಟಕ

karnataka

ETV Bharat / state

ಅರುಣ್ ಸಿಂಗ್ ಭೇಟಿ ಸಂಘಟನಾ ಪ್ರವಾಸವೇ ಹೊರತು ಬೇರೇನೂ ಅಲ್ಲಾ: ತೇಜಸ್ವಿ ಸೂರ್ಯ - ಮಹಾದಾಯಿ ಯೋಜನೆ

ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರಾಜ್ಯ ಪ್ರವಾಸ ಸಂಬಂಧ ಶಿವಮೊಗ್ಗದಲ್ಲಿ ಸಂಸದ ತೇಜಸ್ವಿ ಸೂರ್ಯ ಪ್ರತಿಕ್ರಿಯಿಸಿದ್ದಾರೆ. ಅವರದ್ದು ಪಕ್ಷ ಸಂಘಟನಾ ಪ್ರವಾಸ ಎಂದು ಹೇಳಿದ್ದಾರೆ.

tejaswi-surya-
ತೇಜಸ್ವಿ ಸೂರ್ಯ

By

Published : Sep 1, 2021, 12:54 PM IST

ಶಿವಮೊಗ್ಗ:ಅರುಣ್ ಸಿಂಗ್ ರಾಜ್ಯಕ್ಕೆ ಬಂದಿರುವುದು ಸಂಘಟನಾ ಪ್ರವಾಸವೇ ಹೊರತು ಬೇರೇನೂ ಅಲ್ಲಾ ಎಂದು ಸಂಸದ ತೇಜಸ್ವಿ ಸೂರ್ಯ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅರುಣ್ ಸಿಂಗ್ ಅವರು ರಾಜ್ಯದ ಪ್ರಭಾರಿಗಳು, ಹಾಗಾಗಿ ರಾಜ್ಯದಲ್ಲಿ ಪ್ರವಾಸ ಮಾಡುತ್ತಾರೆ ಎಂದರು.

ಅರುಣ್ ಸಿಂಗ್ ಬಂದಿರುವುದು ಸಂಘಟನಾ ಪ್ರವಾಸವೇ ಹೊರೆತು ಬೇರೆನೂ ಅಲ್ಲಾ: ತೇಜಸ್ವಿ ಸೂರ್ಯ

ಸರ್ಕಾರದಿಂದ ಶಾಲೆ ಆರಂಭದ ನಿರ್ಧಾರ ಕುರಿತು ಪ್ರತಿಕ್ರಿಯಿಸಿದ ಸೂರ್ಯ, ಸರ್ಕಾರ ತಜ್ಞರ ಸಮಿತಿಯನ್ನು ನೇಮಕ ಮಾಡಿದೆ. ಕಳೆದ ಒಂದೂವರೆ ವರ್ಷದಲ್ಲಿ ಕೋವಿಡ್ ಪರಿಸ್ಥಿತಿಯಿಂದ ಶಾಲೆಗಳು ಮುಚ್ಚಿದ್ದವು. ಇದರಿಂದ ಸ್ನೇಹಿತರ ಒಡನಾಟ, ಕೌಶಲ್ಯಗಳಿಂದ ಮಕ್ಕಳು ವಂಚಿತರಾಗಿದ್ದರು. ಹಾಗಾಗಿ ನಾವೆಷ್ಟೇ ಆನ್​​​ಲೈನ್​ ಕ್ಲಾಸ್ ಮಾಡಿದರೂ, ಆಫ್​​​​​ಲೈನ್ ಕ್ಲಾಸ್​​ನಲ್ಲಿ ಕಲಿಯೋದು ತುಂಬಾ ಇರುತ್ತೆ. ಶಿಕ್ಷಣದ ಜೊತೆಗೆ ಮಕ್ಕಳ ಸುರಕ್ಷತೆಯ ಬಗ್ಗೆ ತಜ್ಞರ ಸಮಿತಿ ಸಲಹೆಗಳನ್ನು ನೀಡಲಿದೆ. ಇದರ ಆಧಾರದ ಮೇಲೆ ಸರ್ಕಾರ ನಿರ್ಧಾರ ಕೈಗೊಂಡಿದೆ ಎಂದು ಹೇಳಿದರು.

ಓದಿ:ಸಚಿವ ಪ್ರಭು ಚವ್ಹಾಣ್​ಗೆ ಮುತ್ತಿಗೆ ಹಾಕಲು ಯತ್ನ: ದಲಿತ ಸಂಘಟನೆ ಕಾರ್ಯಕರ್ತರ ಬಂಧನ

ABOUT THE AUTHOR

...view details