ಕರ್ನಾಟಕ

karnataka

ETV Bharat / state

ನೌಕರರ ಪರವಾಗಿ ಸರ್ಕಾರಿ ನೌಕರರ ಸಂಘ ಸದಾ ಇರುತ್ತದೆ: ಷಡಕ್ಷರಿ - teachers workshop in shimogha

ಸರ್ಕಾರಿ ನೌಕರರ ಪರವಾಗಿ ಎಂದಿಗೂ ಸರ್ಕಾರಿ ನೌಕರರ ಸಂಘ ಇರುತ್ತದೆ ಎಂದು ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಹೇಳಿದರು.

teachers workshop in shimogha
ಶಿಕ್ಷಕರ ಕಾರ್ಯಾಗಾರ

By

Published : Feb 23, 2020, 9:39 AM IST

ಶಿವಮೊಗ್ಗ: ಸರ್ಕಾರಿ ನೌಕರರ ಪರವಾಗಿ ಎಂದಿಗೂ ಸರ್ಕಾರಿ ನೌಕರರ ಸಂಘ ಇರುತ್ತದೆ ಎಂದು ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಹೇಳಿದರು.

ಶಿಕ್ಷಕರ ಕಾರ್ಯಾಗಾರ

ನಗರದ ಸರ್ಕಾರಿ ನೌಕರರ ಭವನದಲ್ಲಿ ಕರ್ನಾಟಕ ರಾಜ್ಯ ಉರ್ದು ಟೀಚರ್ಸ್ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶಿಕ್ಷಕರ ಕಾರ್ಯಾಗಾರ ಹಾಗೂ ಶಿಕ್ಷಕರ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ಕಾರಿ ನೌಕರರೆಲ್ಲಾ ಸೇರಿ ನಮ್ಮನ್ನ ಆಯ್ಕೆ ಮಾಡಿದ್ದೀರಿ, ನಿಮ್ಮ ಸಮಸ್ಯೆ ಗಳನ್ನು ಸರ್ಕಾರಕ್ಕೆ ತಿಳಿಸಿ ಬಗೆಹರಿಸುತ್ತೇವೆ ಎಂದರು.

ಸರ್ಕಾರಿ ನೌಕರರ ಸಮಸ್ಯೆಗಳನ್ನು ಸಂಬಂಧಪಟ್ಟ ಸಚಿವರ ಮುಂದಿಟ್ಟು ಕೆಲಸಮಾಡಿಸಿಕೊಂಡು ಬರುವ ತಾಕತ್ತು ಸರ್ಕಾರಿ ನೌಕರರ ಸಂಘಕ್ಕಿದೆ ಎಂದರು. ನೌಕರರ ಜೊತೆಗೆ ಎಂದಿಗೂ ನಾವಿದ್ದೇವೆ ಎಂದು ಭರವಸೆ ನೀಡಿದರು.

ABOUT THE AUTHOR

...view details