ಶಿವಮೊಗ್ಗ:ವಿದ್ಯಾರ್ಥಿನಿಗೆ ಶಾಲಾ ಪಾಠ ಹೇಳಿ ಕೊಡಬೇಕಾದ ಶಿಕ್ಷಕ ಅನುಚಿತವಾಗಿ ವರ್ತಿಸಿ ಪೊಲೀಸರ ಅತಿಥಿಯಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಸರ್ಕಾರಿ ಶಾಲೆಯ 8 ನೇ ತರಗತಿ ವಿದ್ಯಾರ್ಥಿನಿ ಜೊತೆ ದೂದ್ಯಾನಾಯ್ಕ ಅನುಚಿತವಾಗಿ ವರ್ತಿಸಿದ್ದಾನೆ. ಶಿಕ್ಷಕ ದೂದ್ಯನಾಯ್ಕ ವಿಜ್ಞಾನ ವಿಷಯದ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದ. ಕಳೆದ ವಾರ ಶಾಲೆಯ ಲ್ಯಾಬ್ ಸ್ವಚ್ಛಗೊಳಿಸಲು ಮೂವರು ವಿದ್ಯಾರ್ಥಿನಿಯರನ್ನು ಕರೆದುಕೊಂಡು ಹೋಗಿದ್ದಾನೆ. ಇದಕ್ಕೂ ಮೊದಲೇ ಲ್ಯಾಬ್ನಲ್ಲಿ ಮತ್ತೊಬ್ಬ ವಿದ್ಯಾರ್ಥಿನಿ ಇದ್ದಳು. ನಂತರ ಆ ಮೂವರು ವಿದ್ಯಾರ್ಥಿನಿಯರನ್ನು ಹೊರಗೆ ಕಳುಹಿಸಿದ್ದಾನೆ.