ಶಿವಮೊಗ್ಗ: ನಗರದ ಬಾಲರಾಜ್ ಅರಸ್ ರಸ್ತೆಯ ಬಳಿ ಟಾಟಾ ಏಸ್ನಲ್ಲಿ ಹಾಕಿಕೊಂಡು ಬರುತ್ತಿದ್ದ ಕಬ್ಬಿಣದ ಆ್ಯಂಗ್ಲರ್ಗಳು ಜಾರಿ ಡಸ್ಟರ್ ಕಾರ್ ಒಳ ಹೊಕ್ಕಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಶಿವಮೊಗ್ಗದಲ್ಲಿ ಕಾರ್ ಒಳಹೊಕ್ಕ ಕಬ್ಬಿಣದ ಆ್ಯಂಗ್ಲರ್... ತಪ್ಪಿದ ಅನಾಹುತ - ಟಾಟಾ ಏಸ್ ಮತ್ತು ಡಸ್ಟರ್ ಕಾರ್ ನಡುವೆ ಅಪಘಾತ
ಟಾಟಾ ಏಸ್ನಲ್ಲಿ ಹಾಕಿಕೊಂಡು ಬರುತ್ತಿದ್ದ ಕಬ್ಬಿಣದ ಆ್ಯಂಗ್ಲರ್ಗಳು ಜಾರಿ ಡಸ್ಟರ್ ಕಾರ್ ಒಳ ಹೊಕ್ಕಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಅಪಘಾತ
ಗೋಪಿ ವೃತ್ತಕ್ಕೆ ಹೋಗುವ ಮುಖ್ಯ ರಸ್ತೆಯಲ್ಲಿ ಈ ಘಟನೆ ಸಂಭವಿಸಿದ್ದು, ಕೆಲ ಹೊತ್ತು ಟ್ರಾಫಿಕ್ ಜಾಮ್ ಆಗಿತ್ತು. ನಂತರ ಅಲ್ಲಿನ ಸ್ಥಳೀಯರು ಸೇರಿಕೊಂಡು ಕಾರಿನೊಳಗೆ ಹೊಕ್ಕಿದ್ದ ಕಬ್ಬಿಣದ ಆ್ಯಂಗ್ಲರ್ಗಳನ್ನ ಹೊರ ತೆಗೆದಿದ್ದಾರೆ.