ಕರ್ನಾಟಕ

karnataka

By

Published : Jul 3, 2020, 8:36 PM IST

ETV Bharat / state

ಸೇವಾ ಸಿಂಧು ಯೋಜನೆಯಡಿ ವಿವಿಧ ಇಲಾಖೆಗಳ 451 ಸೇವೆ ಲಭ್ಯ

ಸಾರ್ವಜನಿಕರು ಸರ್ಕಾರದ ಸೇವೆಗಳನ್ನು ಸೇವಾಸಿಂಧು ವೆಬ್‍ಸೈಟ್ ಮೂಲಕ ಅಥವಾ ಸಮೀಪದ ಸಿಎಸ್‍ಸಿ ಕೇಂದ್ರಗಳಲ್ಲಿ ಸಹ ಪಡೆದುಕೊಳ್ಳಬಹುದಾಗಿದೆ. ಜಿಲ್ಲೆಯಲ್ಲಿ 350 ಸಿಎಸ್‍ಸಿ ಕೇಂದ್ರಗಳಿವೆ. ಮುಂದಿನ ದಿನಗಳಲ್ಲಿ ಸಕಾಲ ಯೋಜನೆಯಡಿ ಬರುವ ಎಲ್ಲಾ ಸೇವೆಗಳು ಸೇವಾಸಿಂಧು ಯೋಜನೆಯಡಿ ಲಭ್ಯವಾಗಲಿದೆ.

G Anuradha
G Anuradha

ಶಿವಮೊಗ್ಗ: ಸೇವಾ ಸಿಂಧು ಯೋಜನೆಯಡಿ ರಾಜ್ಯದ 47 ಇಲಾಖೆಗಳ 451 ಸೇವೆಗಳನ್ನು ಸಾರ್ವಜನಿಕರು ಆನ್‍ಲೈನ್ ಮೂಲಕ ಪಡೆಯಬಹುದಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಜಿ.ಅನುರಾಧ ಅವರು ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಸೇವಾ ಸಿಂಧು ಯೋಜನೆ ಕುರಿತು ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಕೊರೊನಾ ಪರಿಸ್ಥಿತಿಯಲ್ಲಿ ಸಾರ್ವಜನಿಕರು ನೇರವಾಗಿ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡುವುದನ್ನು ತಪ್ಪಿಸಲು ಸೇವಾಸಿಂಧು ಆನ್‍ಲೈನ್ ಸೇವೆ ಬಳಸಿಕೊಳ್ಳಬೇಕು. ಸಾರ್ವಜನಿಕರು ಸರ್ಕಾರದ ಸೇವೆಗಳನ್ನು ಸೇವಾಸಿಂಧು ವೆಬ್‍ಸೈಟ್ ಮೂಲಕ ಅಥವಾ ಸಮೀಪದ ಸಿಎಸ್‍ಸಿ ಕೇಂದ್ರಗಳಲ್ಲಿ ಸಹ ಪಡೆದುಕೊಳ್ಳಬಹುದಾಗಿದೆ. ಜಿಲ್ಲೆಯಲ್ಲಿ 350 ಸಿಎಸ್‍ಸಿ ಕೇಂದ್ರಗಳಿವೆ. ಮುಂದಿನ ದಿನಗಳಲ್ಲಿ ಸಕಾಲ ಯೋಜನೆಯಡಿ ಬರುವ ಎಲ್ಲಾ ಸೇವೆಗಳು ಸೇವಾಸಿಂಧು ಯೋಜನೆಯಡಿ ಲಭ್ಯವಾಗಲಿದೆ ಎಂದು ತಿಳಿಸಿದರು.

ಕೊರೊನಾ ಸಂದರ್ಭದಲ್ಲಿ ಜಿಲ್ಲಾ, ಅಂತರ್ ಜಿಲ್ಲಾ ಹಾಗೂ ಅಂತರ್ ರಾಜ್ಯ ಪ್ರಯಾಣಕ್ಕೆ ಅನುಮತಿ ಪಡೆಯಲು ಇದೇ ಸೇವಾ ಸಿಂಧುವಿನಲ್ಲಿ ಸಾರ್ವಜನಿಕರು ಅರ್ಜಿ ಸಲ್ಲಿಸಿ ಅನುಮತಿ ಪಡೆದುಕೊಂಡಿದ್ದಾರೆ. ಸಾರ್ವಜನಿಕರು www.sevasindhu.karnataka.gov.in ವೆಬ್‌ಸೈಟ್‌ಗೆ ಲಾಗಿನ್ ಆಗಿ ತಮಗೆ ಬೇಕಾದ ಇಲಾಖೆಗಳನ್ನು ಆಯ್ಕೆ ಮಾಡಿ ಅರ್ಜಿ ಸಲ್ಲಿಸಬಹುದಾಗಿದೆ ಎಂದರು. ಸೇವಾ ಸಿಂಧುವಿನಲ್ಲಿ ಸಾರ್ವಜನಿಕರು ತಮ್ಮ ಅರ್ಜಿಯ ಪ್ರಗತಿಯನ್ನು ಸಹ ಗಮನಿಸಬಹುದು. ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಪ್ರತ್ಯೇಕ ಲಾಗಿನ್ ನೀಡಲಾಗಿದೆ. ಅವರು ಅದನ್ನು ನಿಗದಿತ ಸಮಯದ ಒಳಗಾಗಿ ವಿಲೇವಾರಿ ಮಾಡಬೇಕು. ಅಗತ್ಯವೆನಿಸಿದ್ರೆ ಈ ಕುರಿತು ಇಲಾಖೆಗಳಿಗೆ ತರಬೇತಿ ನೀಡಲಾಗುವುದು ಎಂದರು.

ಸಕಾಲ ಯೋಜನೆಯ ರ್ಯಾಂಕಿಂಗ್ ವ್ಯವಸ್ಥೆಯಲ್ಲಿ ಕೆಲ ಬದಲಾವಣೆಗಳನ್ನು ಮಾಡಲಾಗಿದೆ. ತಿರಸ್ಕೃತವಾಗುವ ಅರ್ಜಿಗಳಿಗೆ ಅಂಕಗಳನ್ನು ಕಳೆಯುವ ಪದ್ಧತಿ ಬಂದಿದೆ. ಕಾರಣವಿಲ್ಲದೆ ಯಾವುದೇ ಅರ್ಜಿಗಳನ್ನು ತಿರಸ್ಕರಿಸಬಾರದು. ತಾವು ಸಲ್ಲಿಸುವ ಅರ್ಜಿಗಳ ಸ್ಥಿತಿಗತಿ ಸಾರ್ವಜನಿಕರು www.sakala.kar.nic.in ವೆಬ್‍ಸೈಟ್ ಮೂಲಕ ಪರಿಶೀಲಿಸಬಹುದಾಗಿದೆ ಎಂದರು.

ABOUT THE AUTHOR

...view details