ಕರ್ನಾಟಕ

karnataka

By

Published : Jul 23, 2020, 10:41 AM IST

ETV Bharat / state

ಸೋಂಕಿತರಿಗೆ ಆಯುರ್ವೇದ ಚಿಕಿತ್ಸೆ ನೀಡಿ : ಸ್ವಾಮಿ ವಿನಯಾನಂದ ಸರಸ್ವತಿ ಸ್ವಾಮೀಜಿ

ಕೊರೊನಾ ಸೋಂಕಿತರನ್ನ ಪ್ರೀತಿಯಿಂದ ಆರೈಕೆ ಮಾಡುವ ರೀತಿ ಹಾಗೂ ಆತ್ಮಶಕ್ತಿ ತುಂಬುವ ಕೆಲಸವನ್ನು ಮಾಡಬೇಕಿದೆ. ಕೊರೊನಾ ಬಾರದಂತೆ ತಡೆಯಲು ರೋಗ ನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಸ್ವಾಮಿ ವಿನಯಾನಂದ ಸರಸ್ವತಿ ಸ್ವಾಮೀಜಿ ಕರೆ ನೀಡಿದ್ದಾರೆ.

ಸ್ವಾಮಿ ವಿನಯಾನಂದ ಸರಸ್ವತಿ ಸ್ವಾಮೀಜಿ
ಸ್ವಾಮಿ ವಿನಯಾನಂದ ಸರಸ್ವತಿ ಸ್ವಾಮೀಜಿ

ಶಿವಮೊಗ್ಗ: ಕೊರೊನಾ ಸೋಂಕಿತರಿಗೆ ಆಯುರ್ವೇದ ಚಿಕಿತ್ಸೆ ನೀಡಿ ಎಂದು ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ವಿನಯಾನಂದ ಸರಸ್ವತಿ ಶ್ರೀ ತಿಳಿಸಿದರು.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಸಹ ಕೊರೊನಾ ಸೋಂಕಿನಿಂದ ಗುಣಮುಖನಾಗಿದ್ದೇನೆ. ಅದಕ್ಕೆ ಆಯುರ್ವೇದ ಚಿಕಿತ್ಸೆಯೇ ಕಾರಣ ಎಂದರು. ಕೊರೊನಾ ಸೋಂಕು ಕಾಣಿಸಿಕೊಂಡಾಗ ಆಯುರ್ವೇದ ಚಿಕಿತ್ಸೆ ನೀಡುವಂತೆ ಪ್ರಧಾನಿಗಳಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೆ, ಅದರಂತೆ ನನಗೆ ಮೊದಲು ಮೂರು ದಿನ ಅಲೋಪತಿ ಚಿಕಿತ್ಸೆ ನೀಡಲಾಯಿತು ನಂತರ ಆಯುರ್ವೇದ ಚಿಕಿತ್ಸೆ ನೀಡಲಾಯಿತು. ನಾನು ಗುಣಮುಖನಾಗಲು ಆಯುರ್ವೇದ ಚಿಕಿತ್ಸೆಯೇ ಕಾರಣ ಎಂದು ಅವರು ಇದೇ ವೇಳೆ, ತಿಳಿಸಿದರು.

ಸ್ವಾಮಿ ವಿನಯಾನಂದ ಸರಸ್ವತಿ ಸ್ವಾಮೀಜಿ

ಸೋಂಕಿತರನ್ನ ಪ್ರೀತಿಯಿಂದ ಆರೈಕೆ ಮಾಡುವ ರೀತಿ ಹಾಗೂ ಆತ್ಮಶಕ್ತಿ ತುಂಬುವ ಕೆಲಸವನ್ನು ಮಾಡಬೇಕಿದೆ. ಕೊರೊನಾ ಬಾರದಂತೆ ತಡೆಯಲು ರೋಗ ನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳಬೇಕು. ಹಾಗಾಗಿ ಗಂಟೆಗೊಮ್ಮೆ ಬಿಸಿ ನೀರು ಕುಡಿಯುವುದು, ಎರಡು ಹೊತ್ತು ತುಳಸಿ ಶುಂಠಿ, ಕಾಳುಮೆಣಸು, ಕರಿಜೀರಿಗೆ, ಬೆಳ್ಳುಳ್ಳಿ ಹಾಗೂ ಚಿಟಿಕಿ ಅರಿಷಿಣ ಪುಡಿ ಹಾಕಿದ ಕಷಾಯ ಕುಡಿಯಬೇಕು. ಎರಡರಿಂದ ಮೂರು ಬಾರಿ ಬಿಸಿನೀರಿನಲ್ಲಿ ಉಪ್ಪುಹಾಕಿ ಬಾಯಿ ಮುಕ್ಕಳಿಸಿ ಉಗಿಯುವುದು ಹಾಗೂ ಒಂದು ಗಂಟೆ ಯೋಗಾಸನ, ರಾತ್ರಿ ಮಲಗುವ ಮುಂಚೆ ಹಾಲಿಗೆ ಒಂದು ಚಿಟಿಕೆ ಅರಿಷಿಣ ಹಾಕಿ ಕುದಿಸಿ ಸೋಸಿ ಕುಡಿಯುವುದು ಮಾಡಿದರೆ ಸೋಂಕು ತಡೆಗಟ್ಟಬಹುದು ಎಂದರು.

ಇತ್ತೀಚಿನ ದಿನಗಳಲ್ಲಿ ಆಯುರ್ವೇದ ಕಿಟ್ ಗಳನ್ನು ವಿತರಿಸಲಾಗುತ್ತಿದೆ. ಹಾಗಾಗಿ ವಿತರಿಸುವ ಮುನ್ನ ಜಾಗೃತರಾಗಿ ವಿತರಿಸಿ. ಇಲ್ಲವಾದರೆ ಆಯುರ್ವೇದಕ್ಕೆ ಕೆಟ್ಟ ಹೆಸರು ಬರಬಹುದು ಎಂದು ಅಭಿಪ್ರಾಯ ಪಟ್ಟರು. ಇನ್ನೂ ಸೋಂಕಿತರಿಗೆ ಅವರಿಗೆ ಮುಕ್ತ ಮನಸಿನಿಂದ ಚಿಕಿತ್ಸೆ ಪಡೆಯಲು ಅವಕಾಶ ನೀಡಿ ಅವರಿಗೆ ಯಾವ ರೀತಿಯ ಚಿಕಿತ್ಸೆ ಬೇಕು ಎಂಬುದನ್ನು ಮೊದಲು ಕೇಳಬೇಕು ಅವರಿಗೆ ಆಯುರ್ವೇದ ದಲ್ಲಿ ನಂಬಿಕೆ ಇದೆ ಎಂದರೆ ಆಯುರ್ವೇದ ಇಲ್ಲವಾದರೆ ಅಲೋಪತಿ ಚಿಕಿತ್ಸೆ ನೀಡಬೇಕು ಎಂದರು.

ABOUT THE AUTHOR

...view details