ಕರ್ನಾಟಕ

karnataka

ETV Bharat / state

ಪೊಲೀಸ್ ಬಂದೋ ಬಸ್ತ್​ನಲ್ಲಿ ತಂದೆಯ ಅಂತಿಮ ದರ್ಶನ ಪಡೆದ ಶಂಕಿತ ಉಗ್ರ ಮಾಝ್ - ಶಿವಮೊಗ್ಗ ಶಂಕಿತ ಉಗ್ರ

ಶಂಕಿತ ಉಗ್ರ ಮಾಝ್ ಇಂದು ತನ್ನ ತಂದೆಯ ಅಂತಿಮ ದರ್ಶನ ಪಡೆದಿದ್ದಾನೆ. ಮಾಝ್ ತಂದೆ ನಿನ್ನೆ ಹೃದಯಾಘಾತದಿಂದ ಮೃತಪಟ್ಟಿದ್ದರು.

ಶಂಕಿತ ಉಗ್ರ ಮಾಝ್
ಶಂಕಿತ ಉಗ್ರ ಮಾಝ್

By

Published : Sep 24, 2022, 5:43 PM IST

ಶಿವಮೊಗ್ಗ: ಬಂಧಿತ ಶಂಕಿತ ಉಗ್ರ ಮಾಝ್ ತಂದೆಮುನೀರ್ ಅಹಮದ್(52) ಅವರು ಶುಕ್ರವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅಂತೆಯೇ ಇಂದು ಮಾಝ್ ಪೊಲೀಸ್ ಭದ್ರತೆಯಲ್ಲಿ ತೆರಳಿ ತನ್ನ ತಂದೆಯ ಅಂತಿಮ ದರ್ಶನ ಪಡೆದುಕೊಂಡಿದ್ದಾನೆ.

ಮಾಝ್ ತಂದೆ ನಿನ್ನೆ ಹೃದಯಾಘಾತದಿಂದ ನಿಧನರಾಗಿದ್ದರು. ಇಂದು ಅವರ ಅಂತಿಮ ಸಂಸ್ಕಾರ ನೆರವೇರಲಿರುವ ಹಿನ್ನೆಲೆಯಲ್ಲಿ ಕೋರ್ಟ್​​ನ ವಿಶೇಷ ಅನುಮತಿಯ ಮೇರೆಗೆ ಮಾಝ್​ನನ್ನು ತೀರ್ಥಹಳ್ಳಿಗೆ ಕರೆದುಕೊಂಡು ಬರಲಾಗಿತ್ತು. ತೀರ್ಥಹಳ್ಳಿಯ ಸೂಪ್ಪಿನಗುಡ್ಡೆಯ ಮನೆಯಲ್ಲಿ ತನ್ನ ತಂದೆಯ ಅಂತಿಮ‌ ದರ್ಶನ ಪಡೆದುಕೊಂಡನು. ಸುಮಾರು 20 ನಿಮಿಷಗಳ ಕಾಲ ಅಂತಿಮ ದರ್ಶನಕ್ಕೆ ಪೊಲೀಸರು ಅವಕಾಶ ಮಾಡಿಕೊಟ್ಟರು. ಈ ವೇಳೆ ಮಾಝ್ ಬಿಕ್ಕಿ ಬಿಕ್ಕಿ ಅತ್ತಿದ್ದಾನೆ. ನಂತರ ಮಾಝ್​​ ನನ್ನು ಶಿವಮೊಗ್ಗಕ್ಕೆ ಪೊಲೀಸರು ಕರೆತಂದರು.

ಮಾಝ್ ಮನೆ ಬಳಿ ಹೋಗಲು ಮಾಧ್ಯಮದವರಿಗೆ ಅವಕಾಶ ಇರಲಿಲ್ಲ. ಆತನ ಮನೆಯಿಂದ 100 ಮೀಟರ್ ದೂರವೇ ಸಂಬಂಧಿಕರು ತಡೆದಿದ್ದರು. ಮಾಝ್ ತಂದೆ ಮೀನಿನ ವ್ಯಾಪಾರಿಯಾಗಿದ್ದು, ತೀರ್ಥಹಳ್ಳಿಯ ಮೀನು ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಿಕೊಂಡಿದ್ದರು. ಈ ಭಾಗದಲ್ಲಿ ಉತ್ತಮ ಹೆಸರು ಗಳಿಸಿದ್ದರು. ಇವರ ನಿಧನಕ್ಕೆ ಇಂದು ತೀರ್ಥಹಳ್ಳಿಯ ಮೀನು ಮಾರುಕಟ್ಟೆ ಬಂದ್ ಮಾಡಿ, ಎಲ್ಲರೂ ಅಂತಿಮ ನಮನ ಸಲ್ಲಿಸಿದ್ದರು.

(ಇದನ್ನೂ ಓದಿ: ಶಂಕಿತ ಉಗ್ರ ಚಟುವಟಿಕೆ ಆರೋಪದ ಮೇಲೆ ಮಗ ಅರೆಸ್ಟ್: ಮಂಗಳೂರಲ್ಲಿ ತಂದೆಗೆ ಹಾರ್ಟ್ ಅಟ್ಯಾಕ್)

ABOUT THE AUTHOR

...view details