ಶಿವಮೊಗ್ಗ:ಕುವೈತ್ನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಹಾಶಿಮ್ ಅವರ ಶವ ಸಂಸ್ಕಾರವು ಇಂದು ಸ್ವಗ್ರಾಮ ತಾಳಗುಪ್ಪದಲ್ಲಿ ನಡೆಸಲಾಯಿತು. ಅವರ ಪಾರ್ಥಿವ ಶರೀರವು ಮಂಗಳೂರಿನಿಂದ ಸಾಗರಕ್ಕೆ ಆಗಮಿಸಿದ ಬಳಿಕ ಅವರ ಸ್ನೇಹಿತರು ತಾಳಗುಪ್ಪಕ್ಕೆ ತೆಗೆದುಕೊಂಡು ಹೋದರು.
ಹಾಶಿಮ್ ಕುಟುಂಬ ನಿರ್ವಹಣೆಗಾಗಿ ಕಳೆದೆರಡು ವರ್ಷಗಳ ಹಿಂದೆ ಕುವೈತ್ನಲ್ಲಿ ಡೆಲಿವರಿ ಬಾಯ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದರು. ವಾರಕ್ಕೆರಡು ಬಾರಿ ಮನೆಗೆ ಫೋನ್ ಮಾಡಿ ಮಾತನಾಡುತ್ತಿದ್ದ ಹಾಶಿಮ್, ಫೋನ್ ಮಾಡುವುದನ್ನು ಬಿಟ್ಟಾಗ, ಮನೆಯವರು ಕುವೈತ್ಗೆ ಫೋನ್ ಮಾಡಿದಾಗ ಹಾಶಿಮ್ ಸಾವನ್ನಪ್ಪಿದ ವಿಚಾರ ತಿಳಿದಿದೆ.