ಶಿವಮೊಗ್ಗ: ಸಕ್ರೆಬೈಲು ಆನೆ ಬಿಡಾರದ ಸೂರ್ಯ ಇಂದು ಉತ್ತರ ಪ್ರದೇಶಕ್ಕೆ ಪ್ರಯಾಣ ಬೆಳೆಸಿದ್ದಾನೆ. ಇನ್ನು ಮುಂದೆ ಅಲ್ಲೇ ಇರಲಿದ್ದಾನೆ. ಸೂರ್ಯ ಆನೆಯು ಉತ್ತರ ಪ್ರದೇಶದ ಹುಲಿ ಮೀಸಲು ಅರಣ್ಯ ಪ್ರದೇಶಕ್ಕೆ ವರ್ಗಾವಣೆ ಆಗಿದ್ದಾನೆ.
ಸಕ್ರೆಬೈಲಿನ ಆನೆ ಸೂರ್ಯ ಉತ್ತರ ಪ್ರದೇಶಕ್ಕೆ ಹೊರಟಿರುವುದು ಇಂದು ಸಕ್ರೆಬೈಲಿನ ಆನೆ ಬಿಡಾರದಲ್ಲಿ ಸಿಬ್ಬಂದಿ ಭಾರದ ಹೃದಯದಿಂದ ಬೀಳ್ಕೊಟ್ಟರು. ಆನೆ ಬೀಳ್ಕೊಡುವ ಮುನ್ನ ಆನೆ ಬಿಡಾರದ ವೈದ್ಯ ವಿನಯ್, ಕಾವಾಡಿಗ ಅಮ್ಜದ್, ರಾಜೇಶ್ ಹಾಗೂ ಇತರ ಸಿಬ್ಬಂದಿ ಸೂರ್ಯ ಆನೆ ಜೊತೆ ಫೋಟೋ ತೆಗೆಸಿಕೊಂಡರು.
ಆನೆಯೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿ ಉತ್ತರ ಪ್ರದೇಶ ಸರ್ಕಾರದ ಕೋರಿಕೆಯ ಮೇಲೆ ಸೂರ್ಯ ಆನೆಯನ್ನು ಕಳುಹಿಸಿಕೊಡಲಾಗುತ್ತಿದೆ. ಇದಕ್ಕಾಗಿ ಸೂರ್ಯ ಆನೆಯನ್ನು ಲಾರಿಯಲ್ಲಿ ಹತ್ತಿಸಿ ಕಳುಹಿಸಿಕೊಡಲಾಯಿತು. ರಾಜ್ಯದ ವಿವಿಧ ಆನೆ ಬಿಡಾರಗಳಿಂದ ಒಟ್ಟು ನಾಲ್ಕು ಆನೆಗಳು ಉತ್ತರ ಪ್ರದೇಶಕ್ಕೆ ಪ್ರಯಾಣ ಬೆಳಸಿವೆ. ಈ ಎಲ್ಲ ಆನೆಗಳನ್ನು ಡಾ ವಿನಯ್ ಅವರೆ ಕರೆದುಕೊಂಡು ಹೋಗುತ್ತಿದ್ದಾರೆ. ಪ್ರತಿದಿನ ಸುಮಾರು 200 ರಿಂದ 250 ಕಿ ಮಿ ದೂರ ಪ್ರಯಾಣ ಬೆಳೆಸಲಿವೆ. ಪ್ರತಿ ದಿನ ಆನೆಗಳನ್ನು ನಿಲ್ಲಿಸಿ ಕ್ಯಾಂಪ್ ಮಾಡಿ, ಅಲ್ಲಿಂದ ಪ್ರಯಾಣ ಮಾಡಲಿದ್ದೇವೆ ಎಂದು ಡಾ ವಿನಯ್ ಈ ಟಿವಿ ಭಾರತ್ಗೆ ಮಾಹಿತಿ ನೀಡಿದ್ದಾರೆ.
2017 ರಲ್ಲಿ ಡಾ. ವಿನಯ್ ಅವರು ರಾಜ್ಯದಿಂದ ಉತ್ತರ ಪ್ರದೇಶಕ್ಕೆ 10 ಆನೆಗಳನ್ನು ಕರೆದುಕೊಂಡು ಹೋಗಿದ್ದರು. ಇದರಿಂದ ಮತ್ತೆ ಆನೆಗಳನ್ನು ಕರೆದುಕೊಂಡು ಹೋಗಲು ಅವರಿಗೆ ಸೂಚಿಸಲಾಗಿದೆ. ಇವರೊಂದಿಗೆ ಸುಮಾರು 30 ಜನರ ತಂಡ ಉತ್ತರಪ್ರದೇಶಕ್ಕೆ ತೆರಳುತ್ತಿವೆ. ಉತ್ತರ ಪ್ರದೇಶದಿಂದ ಇಲ್ಲಿಗೆ ಅಲ್ಲಿನ ತಂಡ ಆಗಮಿಸಿ, ಆನೆಗಳನ್ನು ಸಾಕುವುದು, ಅವುಗಳ ಜೊತೆ ಬೆರೆಯುವುದನ್ನು ಕಲಿತು ಆನೆಗಳ ಜೊತೆ ಪಯಾಣ ಬೆಳಸಿದ್ದಾರೆ. ಅಂದಹಾಗೆ ಸೂರ್ಯ ಸಕ್ರೆಬೈಲು ಆನೆ ಬಿಡಾರದ ನೇತ್ರಾವತಿ ಆನೆಯ ಮಗನಾಗಿದ್ದಾನೆ.
ಓದಿ:ಬೈಕ್ ಸವಾರನ ಸೂಚನೆಗೆ ತಲೆಬಾಗಿದ ಕಾಡಾನೆ.. ಕಾಡಿನತ್ತ ಹೆಜ್ಜೆ ಹಾಕಿದ ಗಜರಾಜ