ಕರ್ನಾಟಕ

karnataka

ETV Bharat / state

ಬ್ಲ್ಯಾಕ್ ಫಂಗಸ್​ ತಗುಲಿದ್ದ ಯುವಕನಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ - ಬ್ಲ್ಯಾಕ್ ಫಂಗಸ್,

ಬ್ಲ್ಯಾಕ್ ಫಂಗಸ್ ತಗುಲಿದ್ದ 31 ವರ್ಷದ ಯುವಕನಿಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ.

shimogha
shimogha

By

Published : May 26, 2021, 3:58 PM IST

ಶಿವಮೊಗ್ಗ: ಸಿಎಂ ತವರು ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್​​ಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

ಕೊರೊನಾ ಎರಡನೇ ಅಲೆಯಲ್ಲಿ ಕೋವಿಡ್ ದಾಳಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ 31 ವರ್ಷದ ಯುವಕ ಬ್ಲ್ಯಾಕ್ ಫಂಗಸ್ ಕಾಯಿಲೆಗೆ ಒಳಗಾಗಿದ್ದ. ಈತನ ಮೂಗಿನಲ್ಲಿ ಫಂಗಸ್ ಬೆಳೆದಿತ್ತು.

ನಿನ್ನೆ ಸಂಜೆ ಮೆಗ್ಗಾನ್ ಆಸ್ಪತ್ರೆಯ ಕಿವಿ ಮತ್ತು ಮೂಗು ವಿಭಾಗದ ಹಿರಿಯ ವೈದ್ಯ ಡಾ. ಗಂಗಾಧರ್ ಮತ್ತು ಡಾ. ಶ್ರೀಧರ್ ಅವರ ತಂಡ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದೆ. ಸದ್ಯ ಯುವಕ ಆರೋಗ್ಯವಾಗಿದ್ದಾನೆ. ವೈದ್ಯರ ನಿಗಾದಲ್ಲಿದ್ದಾನೆ. ಜಿಲ್ಲೆಯಲ್ಲಿ 15 ಜನ ಬ್ಲ್ಯಾಕ್ ಫಂಗಸ್​​ಗೆ ಒಳಗಾಗಿದ್ದು, ಮೆಗ್ಗಾನ್​ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ABOUT THE AUTHOR

...view details