ಕರ್ನಾಟಕ

karnataka

ತುಂಗಾ ನಾಲೆಗಳ ವ್ಯಾಪ್ತಿಯಲ್ಲಿ ಬೇಸಿಗೆ ಭತ್ತ ಬೆಳೆಯದಂತೆ ಸೂಚನೆ

By

Published : Feb 1, 2021, 8:22 PM IST

ತುಂಗಾ ಅಣೆಕಟ್ಟು ನಾಲೆಗಳ ವ್ಯಾಪ್ತಿಯಲ್ಲಿ ಬೇಸಿಗೆ ವೇಳೆ ಭತ್ತ ಬೆಳೆಯದಂತೆ ಅಧಿಕಾರಿಗಳು ಸೂಚಿಸಿದ್ದಾರೆ.

Summer paddy crop restricted in Thunga canal area
ತುಂಗಾ ನಾಲೆಗಳ ವ್ಯಾಪ್ತಿಯಲ್ಲಿ ಬೇಸಿಗೆ ಭತ್ತ ಬೆಳೆಯದಂತೆ ಸೂಚನೆ

ಶಿವಮೊಗ್ಗ : ನೀರಿನ ಕೊರತೆ ಎದುರಾಗುವುದರಿಂದ ತುಂಗಾ ಅಣೆಕಟ್ಟು ನಾಲೆಗಳ ವ್ಯಾಪ್ತಿಯಲ್ಲಿ ಬೇಸಿಗೆ ವೇಳೆ ಭತ್ತ ಬೆಳೆಯದಂತೆ ಅಧಿಕಾರಿಗಳು ಸೂಚಿಸಿದ್ದಾರೆ.

ತುಂಗಾ ಎಡದಂಡೆ ಮತ್ತು ಬಲದಂಡೆ ನಾಲೆಗಳಲ್ಲಿ ಅಣೆಕಟ್ಟೆಯಲ್ಲಿ ಲಭ್ಯವಿರುವ ಪ್ರಮಾಣಕ್ಕೆ ಅನುಗುಣವಾಗಿ ನೀರು ಹರಿಸಲಾಗುತ್ತಿದೆ. ಬೇಸಿಗೆಯಲ್ಲಿ ಶಿವಮೊಗ್ಗ ನಗರಕ್ಕೆ ಕುಡಿಯುವ ನೀರಿನ ಸರಬರಾಜಿಗಾಗಿ ನೀರಿನ ಶೇಖರಣೆ ಅತ್ಯವಶ್ಯಕವಾಗಿದ್ದು, ತೋಟಗಾರಿಕೆ ಹಾಗೂ ನಿಂತ ಬೆಳೆಗಳಿಗೆ ಮಾತ್ರ ನೀರನ್ನು ಕಾಲುವೆಯಲ್ಲಿ ಹರಿಸಲಾಗುವುದು. ಈ ಭಾಗಗಳಲ್ಲಿ ಭತ್ತದ ಬೆಳೆಗೆ ನೀರನ್ನು ಪೂರೈಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ, ರೈತರು ಬೇಸಿಗೆಯಲ್ಲಿ ಭತ್ತ ಬೆಳೆಯಬಾರದೆಂದು ಸೂಚನೆ ನೀಡಲಾಗಿದೆ.

ಓದಿ : ಕೇಂದ್ರ ಬಜೆಟ್​​ನಲ್ಲಿ ರಾಜ್ಯಕ್ಕೆ ಕಡಿಮೆ ಅನುದಾನ: ಯೋಜನಾ ಆಯೋಗದ ಸದಸ್ಯ ಶಿವಕುಮಾರ್

ಭತ್ತ ಬೆಳೆದು ಹಾನಿಯಾದಲ್ಲಿ ಬೆಳೆ ಪರಿಹಾರಕ್ಕೆ ಇಲಾಖೆ ಜವಾಬ್ಧಾರಿಯಾಗಿರುವುದಿಲ್ಲ ಎಂದು ಕಾವೇರಿ ನೀರಾವರಿ ನಿಗಮದ ತುಂಗಾ ಮೇಲ್ದಂಡೆ ಯೋಜನಾ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details