ಕರ್ನಾಟಕ

karnataka

ETV Bharat / state

CET ಯಲ್ಲಿ ಉತ್ತಮ ಅಂಕದ ಅನುಮಾನ: ರಿಸಲ್ಟ್​​ಗೂ ಮುನ್ನವೇ ಸೊರಬದಲ್ಲಿ ವಿದ್ಯಾರ್ಥಿ ಆತ್ಮಹತ್ಯೆ - Shimoga student died

ಸಿಇಟಿಯಲ್ಲಿ ಉತ್ತಮ‌ ಅಂಕ ಬರದೇ ಸರ್ಕಾರಿ‌ ಕೋಟಾದಡಿ ಇಂಜಿನಿಯರಿಂಗ್​ ಅಭ್ಯಾಸ ಮಾಡಲು ಆಗುತ್ತದೆಯೋ ಇಲ್ಲವೋ ಎಂದು ಫಲಿತಾಂಶ ಬರುವ ಮುನ್ನವೇ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

students committed suicide before CET results come
ಚಿನ್ಮಯ್

By

Published : Aug 9, 2021, 6:54 PM IST

Updated : Aug 9, 2021, 7:36 PM IST

ಶಿವಮೊಗ್ಗ:ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯಲ್ಲಿ ಉತ್ತಮ ಅಂಕ ಬರುತ್ತದೆಯೋ ಇಲ್ಲವೋ ಎಂಬ ಆತಂಕದಿಂದ ವಿದ್ಯಾರ್ಥಿಯೊಬ್ಬ ನೇಣಿಗೆ‌ ಶರಣಾಗಿರುವ ಘಟನೆ ಜಿಲ್ಲೆಯ ಚಂದ್ರಗುತ್ತಿಯಲ್ಲಿ ನಡೆದಿದೆ.

ಚಿನ್ಮಯ್

ಸೊರಬ ತಾಲೂಕು‌ ಚಂದ್ರಗುತ್ತಿಯ ನಿವಾಸಿ ಚಿನ್ಮಯ್ (19) ತನ್ನ ಮನೆಯ ಹಿಂದೆಯೇ ನೇಣಿಗೆ‌ ಶರಣಾಗಿದ್ದಾನೆ. ಚಿನ್ಮಯ್​, ಚಂದ್ರಗುತ್ತಿಯ ಕೃಷ್ಣರಾವ್​​ ಅವರ ಮಗನಾಗಿದ್ದು, ಕಳೆದ ಬಾರಿ ಸಹ ಸಿಇಟಿಯಲ್ಲಿ ಉತ್ತಮ ಅಂಕ ಬಾರದ ಕಾರಣ ಮತ್ತೊಮ್ಮೆ ಸಿಇಟಿ ಪರೀಕ್ಷೆ ಬರೆದಿದ್ದ. ಆದರೆ ತನಗೆ ಈ ಬಾರಿಯೂ ಉತ್ತಮ‌ ಅಂಕ ಬರದೇ ಸರ್ಕಾರಿ‌ ಕೋಟಾದಡಿ ಇಂಜಿನಿಯರಿಂಗ್​ (ಬಿಇ) ಅಭ್ಯಾಸ ಮಾಡಲು ಆಗುತ್ತದೆಯೋ ಇಲ್ಲವೋ ಎಂದು ಪ್ರಾಣ ಬಿಟ್ಟಿದ್ದಾನೆ.

ಇದನ್ನೂ ಓದಿ:ಕ್ಷುಲ್ಲಕ‌ ಕಾರಣಕ್ಕೆ ಹಾಡ ಹಗಲೇ ಯುವಕನ ಕೊಲೆ: ಬೆಚ್ಚಿಬಿದ್ದ ಶಿವಮೊಗ್ಗ ಜನತೆ

ಘಟನೆ ಸಂಬಂಧ ಸೊರಬ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Aug 9, 2021, 7:36 PM IST

ABOUT THE AUTHOR

...view details