ಶಿವಮೊಗ್ಗ: ಸಾಗರ ಪಟ್ಟಣದಲ್ಲಿ ನಡೆದ ಬೈಕ್ ಅಪಘಾತದಲ್ಲಿ ಕಾಲೇಜು ವಿದ್ಯಾರ್ಥಿಯೊಬ್ಬ ಮೃತ ಪಟ್ಟಿದ್ದಾನೆ.
ಬೈಕ್ ಅಪಘಾತ: ಕಾಲೇಜು ವಿದ್ಯಾರ್ಥಿ ಸಾವು - shimogha latest crime news
ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಕಾಲೇಜು ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದಲ್ಲಿ ನಡೆದಿದೆ.
ಬೈಕ್ ಅಪಘಾತದಲ್ಲಿ ಕಾಲೇಜು ವಿದ್ಯಾರ್ಥಿ ಸಾವು
ಸಾಗರ ಪಟ್ಟಣದ ಎಲ್ .ಬಿ ಕಾಲೇಜಿನ ಲೋಹಿತ್ ಕುಗ್ವೆ ಮೃತ ವಿದ್ಯಾರ್ಥಿ. ಸಾಗರ ಪಟ್ಟಣದ ರಾಣಿ ಚೆನ್ನಮ್ಮ ವೃತ್ತದಲ್ಲಿ ಬೈಕ್ನಲ್ಲಿ ವೇಗವಾಗಿ ಸಾಗುವಾಗ ಎದುರಿನಿಂದ ಬಂದ ಬೈಕ್ ಗೆ ಡಿಕ್ಕಿ ಹೊಡೆದು ರಸ್ತೆಗೆ ಬಿದ್ದಿದ್ದಾನೆ. ರಸ್ತೆಗೆ ತಲೆ ಹೊಡೆದ ಪರಿಣಾಮ ತೀವ್ರ ರಕ್ತಸ್ರಾವವಾಗಿ ಸಾವನ್ನಪ್ಪಿದ್ದಾನೆ. ಈ ಕುರಿತು ಸಾಗರ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.