ಕರ್ನಾಟಕ

karnataka

ETV Bharat / state

ಕ್ಯಾಂಪ್​ಗೆ ತೆರಳಿದ್ದ ವಿದ್ಯಾರ್ಥಿನಿ ಸಾವು: ಪೋಷಕರ ಅನುಮಾನ - Shivamogga Accident News

ಕ್ಯಾಂಪ್​ಗೆಂದು ತೆರಳಿದ್ದ ಭದ್ರಾವತಿ ಮೂಲದ ವಿದ್ಯಾರ್ಥಿನಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಸಾವನ್ನಪ್ಪಿರುವ ಘಟನೆ  ಶಿವಮೊಗ್ಗ- ಶಿಕಾರಿಪುರ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.

Student Died For Road Accident
ಕ್ಯಾಂಪ್​ಗೆ ತೆರಳಿದ್ದ ವಿದ್ಯಾರ್ಥಿನಿ ಸಾವು

By

Published : Dec 7, 2019, 3:55 PM IST

ಶಿವಮೊಗ್ಗ: ಕ್ಯಾಂಪ್​ಗೆಂದು ತೆರಳಿದ್ದ ಭದ್ರಾವತಿ ಮೂಲದ ವಿದ್ಯಾರ್ಥಿನಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಸಾವನ್ನಪ್ಪಿರುವ ಘಟನೆ ಶಿವಮೊಗ್ಗ- ಶಿಕಾರಿಪುರ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.

ಶಿವಮೊಗ್ಗದ ಪೆಸೆಟ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಪರಿಣಿತ (20) ಮೃತ ವಿದ್ಯಾರ್ಥಿನಿ.

ಕಾಲೇಜು ಕ್ಯಾಂಪ್​ಗಾಗಿ ಶಿವಮೊಗ್ಗದ ತಾಲೂಕು ಬೀರನಕೆರೆ ಗ್ರಾಮಕ್ಕೆ ಕಳೆದ ನಾಲ್ಕು ದಿನದ ಹಿಂದೆ ತೆರಳಿದ್ದ ಈಕೆ, ಇಂದು ಉಪನ್ಯಾಸಕರ ಜೊತೆ ಶಿವಮೊಗ್ಗ-ಶಿಕಾರಿಪುರ ರಾಜ್ಯ ಹೆದ್ದಾರಿಯಲ್ಲಿ ವಾಕಿಂಗ್ ಮಾಡುವಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ ಎಂದು ಉಪನ್ಯಾಸಕರು ತಿಳಿಸಿದ್ದಾರೆ.

ಆದರೆ ವಿದ್ಯಾರ್ಥಿನಿ ಸಾವಿನ ಬಗ್ಗೆ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ.

ಕ್ಯಾಂಪ್​ಗೆ ತೆರಳಿದ್ದ ವಿದ್ಯಾರ್ಥಿನಿ ಸಾವು

ವಿದ್ಯಾರ್ಥಿನಿಯ ಶವವನ್ನು ಮೆಗ್ಗಾನ್ ಆಸ್ಪತ್ರೆಯ ಶವಗಾರದಲ್ಲಿ ಇಡಲಾಗಿದೆ. ಮಗಳ ಸಾವಿನಿಂದ ಕಂಗಾಲಾದ ಪೋಷಕರು, ಕಾಲೇಜು ಸಿಬ್ಬಂದಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರು ಮಧ್ಯಪ್ರವೇಶ ಮಾಡಿ ಪರಿಸ್ಥಿತಿ ತಿಳಿಗೊಳಿಸಿದ್ದು, ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details