ಶಿವಮೊಗ್ಗ: ಏಳನೇ ತರಗತಿಯ ವಿದ್ಯಾರ್ಥಿ ತನ್ನ ಸಾವಿಗೆ ತಾನೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಾಗರ ತಾಲೂಕು ಬ್ಯಾಕೋಡು ಗ್ರಾಮದಲ್ಲಿ ನಡೆದಿದೆ.
ದರ್ಶನ್(13) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಈತ ಶಿವಮೊಗ್ಗ ತಾಲೂಕು ಬಿ.ಬೀರನಹಳ್ಳಿ ಗ್ರಾಮದ ಭಾಗ್ಯ ಎಂಬುವರ ಪುತ್ರನಾಗಿದ್ದು, ಬ್ಯಾಕೋಡಿನಲ್ಲಿ ಒಬ್ಬಂಟಿಯಾಗಿ ವಾಸವಾಗಿದ್ದ ತನ್ನ ಚಿಕ್ಕಮ್ಮಳೊಂದಿಗೆ ವಾಸವಿರುವಂತೆ ತಾಯಿ ಒತ್ತಾಯಿಸಿದ್ದರಿಂದ ಅನಿವಾರ್ಯವಾಗಿ ಅಲ್ಲಿ ನೆಲೆಸಿದ್ದ ಎನ್ನಲಾಗಿದೆ.