ಕರ್ನಾಟಕ

karnataka

ETV Bharat / state

ಶಿವಮೊಗ್ಗದಲ್ಲಿ ವಿದ್ಯಾರ್ಥಿನಿ ಶವ ಪತ್ತೆ.. ಪ್ರೀತಿಸಿದವನಿಂದಲೇ ಕೊಲೆ ನಡೆದಿರುವ ಶಂಕೆ..! - student dead body found at shivamogga

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕು ಬೆಳ್ಳೂರು ಸಮೀಪದ ನೇರಲಗಿ ಕೆರೆ ಬಳಿ ಭಟ್ಕಳ ಮೂಲದ ಯುವತಿಯ ಶವ ಪತ್ತೆಯಾಗಿದೆ. ಅಲ್ಲದೇ, ಈಕೆಯನ್ನು ಪ್ರೀತಿಸುತ್ತಿದ್ದ ಯುವಕ ಡೆತ್​ನೋಟ್​ ಬರೆದಿಟ್ಟು, ವಿಷ ಸೇವಿಸಿದ್ದಾನೆ.

Student kavitha and Shivamurthy
ಶಿವಮೂರ್ತಿ

By

Published : Aug 26, 2021, 6:02 PM IST

Updated : Aug 26, 2021, 6:07 PM IST

ಶಿವಮೊಗ್ಗ:ಹೊಸನಗರ ತಾಲೂಕು ಬೆಳ್ಳೂರು ಸಮೀಪದ ನೇರಲಗಿ ಕೆರೆ ಬಳಿ ವಿದ್ಯಾರ್ಥಿನಿ ಶವ ಪತ್ತೆಯಾಗಿದೆ. ಪ್ರೀತಿಸಿದವನಿಂದಲೇ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಆಕೆಯನ್ನು ಕವಿತಾ ಎಂದು ಗುರುತಿಸಲಾಗಿದೆ.

ಕವಿತ

ಕೊಲೆ ಶಂಕೆಗೆ ಕಾರಣ?:

ಬೆಳ್ಳೂರು ಗ್ರಾಮದ (22 ವರ್ಷ) ಶಿವಮೂರ್ತಿ ಎಂಬಾತ ವಿಷ ಸೇವಿಸಿ, ತನ್ನ ಮನೆಗೆ ಬಂದಾಗ ಆತನಿಂದ ಯುವತಿ ಶವ ಕೆರೆ ಪಕ್ಕದಲ್ಲಿ‌ ಇರುವುದು ತಿಳಿದಿದೆ. ಶಿವಮೂರ್ತಿ ರಿಪ್ಪನಪೇಟೆಯ ಪದವಿ ಕಾಲೇಜಿನಲ್ಲಿ ಓದುತ್ತಿದ್ದಾನೆ.

ಈತ ತಾನೊಂದು ಡೆತ್​ನೋಟ್​ ಬರೆದಿದ್ದು, ಅದರಲ್ಲಿ ತಾನು ಭಟ್ಕಳ ಮೂಲದ ಯುವತಿಯನ್ನು ಕಳೆದ 7 ವರ್ಷಗಳಿಂದ ಪ್ರೀತಿಸುತ್ತಿದ್ದೆ, ಆಕೆಯೂ ಸಹ ತನ್ನನ್ನು ಪ್ರೀತಿಸುತ್ತಿದ್ದಳು. ಆದರೆ, ಕೆಲ ದಿನಗಳಿಂದ ಭದ್ರಾವತಿಯ ಆ್ಯಂಬುಲೆನ್ಸ್ ಡ್ರೈವರ್​ನನ್ನು ಪ್ರೀತಿಸಲು ಶುರು ಮಾಡಿದ್ದಳು. ಇದರಿಂದ ಆಕೆಯನ್ನು ಕರೆದು ಯಾಕೆ ಬೇರೆಯವರನ್ನು ಪ್ರೀತಿಸುತ್ತಿಯಾ? ಎಂದು ಕೇಳಿದೆ. ಮುಂದೆ ನಡೆಯುವ ಘಟನೆಗೆ ಅವಳೇ ಕಾರಣ. ಎಂದಿಗೂ ಪ್ರೀತಿಯನ್ನು ನಂಬಬೇಡಿ ಸ್ನೇಹಿತರೆ ಎಂದು ಡೆತ್​ನೋಟ್​ ಬರೆದಿದ್ದಾನೆ. ತಾನು ತನ್ನ ಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿದ್ದಾನೆ.

ಡೆತ್​ನೋಟ್​

ಈ ನಡುವೆ ವಿಷ ಸೇವಿಸಿ ಮನೆಗೆ ಬಂದ ಈತನನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಮತ್ತೊಂದು ಕಡೆ ಶವದ ಬಳಿ ವಿಷದ ಬಾಟಲಿ ಪತ್ತೆಯಾಗಿದೆ. ಸ್ಥಳಕ್ಕೆ ಹೊಸನಗರ ಸಿಪಿಐ ಮಧುಸೂಧನ್ ಭೇಟಿ ನೀಡಿ ಯುವತಿಯ ಶವವನ್ನು ರಿಪ್ಪನ್​ಪೇಟೆಗೆ ರವಾನೆ ಮಾಡಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ.

ಓದಿ:ಪರಪ್ಪನ ಅಗ್ರಹಾರಕ್ಕೆ ಗೃಹಸಚಿವ ಆರಗ ಜ್ಞಾನೇಂದ್ರ ಭೇಟಿ..

Last Updated : Aug 26, 2021, 6:07 PM IST

ABOUT THE AUTHOR

...view details