ಶಿವಮೊಗ್ಗ: ನೆರೆ ಮನೆಯ ಯುವಕನ ಕಾಟಕ್ಕೆ ಬೇಸತ್ತು ಕಾಲೇಜು ವಿದ್ಯಾರ್ಥಿನಿಯೋರ್ವಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೊಸನಗರದಲ್ಲಿ ನಡೆದಿದೆ. ತಾಲೂಕಿನ ವಸವೆ ಗ್ರಾಮದ ಕುಂಟಿಗೆ ವಾಸಿಯಾದ ಪಟೇಲ್ ಈಶ್ವರಪ್ಪ ಗೌಡರ ಪುತ್ರಿ ವಿದ್ಯಾಶ್ರೀ (21) ಆತ್ಮಹತ್ಯೆ ಮಾಡಿಕೊಂಡ ಯುವತಿ.
ವಿದ್ಯಾಶ್ರೀ, ಹೊಸನಗರದ ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ಬಿಕಾಂ ಓದುತ್ತಿದ್ದಳು. ಅದೇ ಗ್ರಾಮದ ಮಹೇಶ್ ಗೌಡರ ಪುತ್ರ ಶಂಶಾಕ್ ಎಂಬಾತ ವಿದ್ಯಾಶ್ರೀಗೆ ಪ್ರತಿ ದಿನ ಕಾಲೇಜಿಗೆ ಹೋಗುವಾಗ, ಬರುವಾಗ ತನ್ನನ್ನು ಪ್ರೀತಿಸುವಂತೆ ಕಾಡಿಸುತ್ತಿದ್ದ ಎನ್ನಲಾಗಿದೆ. ಇದರಿಂದ ಮನನೊಂದ ಆಕೆ, ಏಪ್ರಿಲ್ 19ರಂದು ಮನೆಯಲ್ಲಿಯೇ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು.