ಕರ್ನಾಟಕ

karnataka

ಶಿವಮೊಗ್ಗದಲ್ಲಿ ಮೈಕ್​ಗಳಿಗೆ ಪೊಲೀಸರ ಲಗಾಮು.. ಸೌಂಡ್​ ಕಿರಿಕಿರಿಯಿಂದ ಜನತೆ ನಿರಾಳ

ಶಿವಮೊಗ್ಗದ ಹಲವೆಡೆ ಕೋರ್ಟ್ ಆದೇಶಕ್ಕೂ ಮುನ್ನ ರಾತ್ರಿ ಹಗಲೆನ್ನದೆ ಧಾರ್ಮಿಕ ಕೇಂದ್ರಗಳಲ್ಲಿ ಮೈಕ್​ ಬಳಸಲಾಗುತ್ತಿತ್ತು. ಕೋರ್ಟ್ ಆದೇಶದ ಬಳಿಕ ಶಿವಮೊಗ್ಗ ಪೊಲೀಸರು ಜಿಲ್ಲೆಯಾದ್ಯಂತ ಧಾರ್ಮಿಕ ಕೇಂದ್ರಗಳ ಮೈಕ್​ಗಳಿಗೆ ಲಗಾಮು ಹಾಕಿದ್ದಾರೆ. ಹಗಲು-ರಾತ್ರಿ ಎನ್ನದೆ ದೊಡ್ಡ ಶಬ್ದದ ಮೈಕ್ ಬಳಕೆಯಿಂದ ಸಮಸ್ಯೆ ಎದುರಿಸುತ್ತಿದ್ದ ವೃದ್ಧರು, ವಿದ್ಯಾರ್ಥಿಗಳು ಹಾಗೂ ಮಕ್ಕಳು ನಿರಾಳರಾಗಿದ್ದಾರೆ.

By

Published : Jun 19, 2022, 6:21 PM IST

Published : Jun 19, 2022, 6:21 PM IST

ETV Bharat / state

ಶಿವಮೊಗ್ಗದಲ್ಲಿ ಮೈಕ್​ಗಳಿಗೆ ಪೊಲೀಸರ ಲಗಾಮು.. ಸೌಂಡ್​ ಕಿರಿಕಿರಿಯಿಂದ ಜನತೆ ನಿರಾಳ

strict-action-on-loudspeakers-in-shivamogga
ಶಿವಮೊಗ್ಗದಲ್ಲಿ ಮೈಕ್​ಗಳಿಗೆ ಪೊಲೀಸರ ಲಗಾಮು... ಸೌಂಡ್​ ಕಿರಿಕಿರಿಯಿಂದ ಜನತೆ ನಿರಾಳ

ಶಿವಮೊಗ್ಗ:ಜಿಲ್ಲೆಯ ಮಂದಿರ, ಮಸೀದಿ ಹಾಗೂ ಚರ್ಚ್​ಗಳಲ್ಲಿ ಮೈಕ್ ಹಾಗೂ ಲೌಡ್ ಸ್ಪೀಕರ್​ ಬಳಕೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಧಾರ್ಮಿಕ ಮಂದಿರಗಳಲ್ಲಿ ಮೈಕ್​ಗೆ ಸೌಂಡ್ ಗವರ್ನರ್ ಅಳವಡಿಸುವಂತೆಯೂ ಸೂಚನೆ ನೀಡಲಾಗಿದೆ. ರಾತ್ರಿ ವೇಳೆ ಯಾವುದೇ ಧಾರ್ಮಿಕ ಕೇಂದ್ರಗಳಲ್ಲಿ ಮೈಕ್ ಬಳಕೆ ನಿಷೇಧಿಸಲಾಗಿದೆ.

ಕೋರ್ಟ್ ಆದೇಶಕ್ಕೂ ಮುನ್ನ ರಾತ್ರಿ ಹಗಲೆನ್ನದೆ ಧಾರ್ಮಿಕ ಕೇಂದ್ರಗಳಲ್ಲೂ ಮೈಕ್​ ಬಳಸಲಾಗುತ್ತಿತ್ತು. ಕೋರ್ಟ್ ಆದೇಶದ ಬಳಿಕ ಶಿವಮೊಗ್ಗ ಪೊಲೀಸರು ಜಿಲ್ಲೆಯಾದ್ಯಂತ ಧಾರ್ಮಿಕ ಕೇಂದ್ರಗಳ ಮೈಕ್​ಗಳಿಗೆ ಲಗಾಮು ಹಾಕಿದ್ದಾರೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಯಾವುದೇ ಧಾರ್ಮಿಕ ಕೇಂದ್ರಗಳಲ್ಲಿ ಮೈಕ್ ಬಳಕೆ ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ಎಸ್​ಪಿ ಡಾ.ಲಕ್ಷ್ಮೀಪ್ರಸಾದ್ ಹೇಳಿದ್ದಾರೆ.

ಎಸ್​ಪಿ ಡಾ.ಲಕ್ಷ್ಮೀಪ್ರಸಾದ್

ಸೌಂಡ್ ಗವರ್ನರ್ ಅಳವಡಿಕೆ:ಹಗಲು ವೇಳೆ ಈ ಹಿಂದೆ ಲೌಡ್ ಸ್ಪೀಕರ್ ಮೂಲಕ ಹೆಚ್ಚಿನ ಶಬ್ದದೊಂದಿಗೆ ಮೈಕ್​ ಬಳಸಲಾಗುತ್ತಿತ್ತು. ಇದೀಗ ಹಗಲು ವೇಳೆ ಬಳಸುವ ಲೌಡ್ ಸ್ಪೀಕರ್​ಗಳಿಗೂ ಕಡಿವಾಣ ಹಾಕಲಾಗಿದೆ. ಹಗಲು ವೇಳೆ 55 ಡೆಸಿಬಲ್​ಗಳಿಗಿಂತ ಕಡಿಮೆ ಶಬ್ದ ಬರುವಂತೆ ಮೈಕ್ ಬಳಸುವಂತೆ ಧಾರ್ಮಿಕ ಕೇಂದ್ರಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೆ ಮೈಕ್​ಗಳಿಗೆ ಆಯಾ ಧಾರ್ಮಿಕ ಕೇಂದ್ರಗಳೇ ಸೌಂಡ್ ಗವರ್ನರ್ ಅಳವಡಿಸುವಂತೆ ಸೂಚನೆ ನೀಡಲಾಗಿದ್ದು, ಈಗಾಗಲೇ ಧಾರ್ಮಿಕ ಕೇಂದ್ರಗಳ ಮೈಕ್​ಗಳಿಗೆ ಸೌಂಡ್ ಗವರ್ನರ್ ಅಳವಡಿಸಲಾಗುತ್ತಿದೆ.

ಪೊಲೀಸ್ ಇಲಾಖೆ ನೋಟಿಸ್: ಶಬ್ದ ಮಾಲಿನ್ಯ ತಡೆಗಟ್ಟಲು ಪೊಲೀಸ್ ಇಲಾಖೆ ಈಗಾಗಲೇ ಬಿಗಿ ಕ್ರಮಗಳನ್ನು ಕೈಗೊಂಡಿದೆ. ಶಿವಮೊಗ್ಗ ಜಿಲ್ಲೆಯ 700ಕ್ಕೂ ಅಧಿಕ ಧಾರ್ಮಿಕ ಕೇಂದ್ರಗಳಿಗೆ ಪೊಲೀಸ್ ಇಲಾಖೆ ನೋಟಿಸ್ ನೀಡಿ ಎಷ್ಟು ಡೆಸಿಬಲ್ ಶಬ್ದ ಬರುವ ಮೈಕ್ ಬಳಸಬೇಕು ಎಂದು ಸೂಚನೆ ನೀಡಿತ್ತು. ನೋಟಿಸ್ ನೀಡಿದ ಬಳಿಕ ಧಾರ್ಮಿಕ ಕೇಂದ್ರಗಳನ್ನು ಮಾನಿಟರಿಂಗ್ ಮಾಡಲಾಗುತ್ತಿದೆ ಎಂದು ಎಸ್​ಪಿ ತಿಳಿಸಿದ್ದಾರೆ.

ಯಾವ ಧಾರ್ಮಿಕ ಕೇಂದ್ರಗಳಲ್ಲಿ ನೋಟಿಸ್​​ನಲ್ಲಿನ ನಿಯಮಗಳನ್ನು ಉಲ್ಲಂಘಿಸಿ ಹೆಚ್ಚು ಶಬ್ದ ಬರುವ ಮೈಕ್ ಅಳವಡಿಸಲಾಗಿದೆಯೋ ಅಲ್ಲಿಗೆ ತೆರಳುವ ಪೊಲೀಸರು ಆರಂಭಿಕವಾಗಿ ಆ ಧಾರ್ಮಿಕ ಕೇಂದ್ರಗಳ ಮುಖ್ಯಸ್ಥರಿಗೆ ನೋಟಿಸ್ ನೀಡುವ ಕೆಲಸ ಮಾಡುತ್ತಿದ್ದಾರೆ. ಜೊತೆಗೆ 55 ಡೆಸಿಬಲ್​ಗಿಂತ ಹೆಚ್ಚು ಶಬ್ದ ಬರುವ ಮೈಕ್ ಅಳವಡಿಸಿದ್ದ ಜಿಲ್ಲೆಯ 90ಕ್ಕೂ ಹೆಚ್ಚು ಕಡೆ ಸೌಂಡ್ ಗವರ್ನರ್ ಅಳವಡಿಸಲು ಪೊಲೀಸರು ಸೂಚನೆ ನೀಡಿದ್ದಾರೆ.

ಇದನ್ನೂ ಓದಿ:ಧಮ್ ಇದ್ರೆ ಮೋದಿ ಬೆಂಗಳೂರಲ್ಲಿ ಅಗ್ನಿಪಥ್​ ಬಗ್ಗೆ ಸುದ್ದಿಗೋಷ್ಟಿ ಮಾಡಲಿ : ಪ್ರಿಯಾಂಕ್ ಖರ್ಗೆ ಸವಾಲು

For All Latest Updates

TAGGED:

ABOUT THE AUTHOR

...view details