ಕರ್ನಾಟಕ

karnataka

ETV Bharat / state

ನಾಳೆಯಿಂದ ಅನಾವಶ್ಯಕವಾಗಿ ಹೊರಗೆ ಬಂದರೆ ಕಠಿಣ ಕ್ರಮ: ಶಿವಮೊಗ್ಗ ಎಸ್​ಪಿ ಎಚ್ಚರಿಕೆ - ಶಿವಮೊಗ್ಗದಲ್ಲಿ ಲಾಕ್​ಡೌನ್​

ನಾಳೆಯಿಂದ ಯಾರೂ ಕೂಡ ಮನೆಯಿಂದ ಅನಾವಶ್ಯಕವಾಗಿ ಹೊರಬರಬೇಡಿ ಎಂದು ಶಿವಮೊಗ್ಗ ಎಸ್​ಪಿ ಲಕ್ಷ್ಮಿ ಪ್ರಸಾದ್ ಸಾರ್ವಜನಿಕರಿಗೆ ಮನವಿ ಮಾಡಿಕೊಂಡಿದ್ದಾರೆ.

Shimoga S P Warning
ಶಿವಮೊಗ್ಗ ಎಸ್​ಪಿ ಎಚ್ಚರಿಕೆ

By

Published : May 9, 2021, 8:23 PM IST

ಶಿವಮೊಗ್ಗ: ನಾಳೆಯಿಂದ ಲಾಕ್​ಡೌನ್ ಜಾರಿಯಾಗಲಿದ್ದು, ಸರ್ಕಾರದ ನಿಯಮ ಮೀರಿ ಅನಗತ್ಯವಾಗಿ ಓಡಾಡಿದರೆ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗುತ್ತದೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಲಕ್ಷ್ಮಿ ಪ್ರಸಾದ್ ಎಚ್ಚರಿಸಿದ್ದಾರೆ.

ಶಿವಮೊಗ್ಗ ಎಸ್​ಪಿ ಎಚ್ಚರಿಕೆ

ನಗರದಲ್ಲಿ ಮಾತನಾಡಿದ ಅವರು, ಮನೆ ಹತ್ತಿರವಿರುವ ಶಾಪ್​ಗಳಿಗೆ ನಡೆದುಕೊಂಡು ಹೋಗಿ ತಮಗೆ ಬೇಕಾದ ಅಗತ್ಯ ವಸ್ತುಗಳನ್ನು ತರಬಹುದು. ಇದನ್ನು ಹೊರತುಪಡಿಸಿ ಅನಗತ್ಯವಾಗಿ ವಾಹನಗಳಲ್ಲಿ ಓಡಾಡಿದರೆ ವಾಹನಗಳನ್ನು ವಶಕ್ಕೆ ಪಡೆಯಲಾಗುತ್ತದೆ. ಜಿಲ್ಲಾಡಳಿತ ನೀಡಿರುವ ಪಾಸ್​ಗಳನ್ನು ಹೊರತುಪಡಿಸಿ ಉಳಿದ ಪಾಸ್​ಗಳಿಗೆ ಅವಕಾಶ ನೀಡುವುದಿಲ್ಲ. ಶಿವಮೊಗ್ಗ ಸಿಟಿಯಲ್ಲಿ 31 ಚೆಕ್​ಪೋಸ್ಟ್ ಹಾಗೂ ಜಿಲ್ಲೆಯ ಗಡಿಭಾಗ ಸೇರಿದಂತೆ ಜಿಲ್ಲೆಯಲ್ಲಿ 76 ಚೆಕ್​ಪೋಸ್ಟ್​ಗಳನ್ನು ನಿರ್ಮಿಸಲಾಗಿದೆ.

ನಾಳೆಯಿಂದ ಪ್ರತಿಯೊಂದು ವಾಹನವನ್ನು ತಪಾಸಣೆ ಮಾಡಿ ತುರ್ತು ಕೆಲಸಗಳಿಗೆ ಮಾತ್ರ ಅವಕಾಶ ಕೊಡಲಾಗುವುದು. ಈಗಾಗಲೇ ಸರ್ಕಾರದ ನಿಯಮ ಮೀರಿ ವ್ಯಾಪಾರ ಮಾಡುತ್ತಿದ್ದ ಒಟ್ಟು 146 ಅ‌ಂಗಡಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದರು.

ABOUT THE AUTHOR

...view details