ಶಿವಮೊಗ್ಗ :ಮಹಾನಗರ ಪಾಲಿಕೆ ವ್ಯಾಪ್ತಿಯ ಪ್ರಮುಖ ರಸ್ತೆಗಳಲ್ಲಿ ಬೀದಿಬದಿ ವ್ಯಾಪಾರಸ್ಥರಿಂದಾಗಿ ಸಂಚಾರಕ್ಕೆ ಆಡಚಣೆ ಉಂಟಾಗುತ್ತಿದೆ. ಹಾಗಾಗಿ, ಪಾಲಿಕೆ ಇಲ್ಲಿನ ಕುವೆಂಪು ರಸ್ತೆ ಹಾಗೂ ಸಾಗರ ರಸ್ತೆಯ ಬೀದಿ ಬದಿ ವ್ಯಾಪಾರಸ್ಥರನ್ನ ತೆರವುಗೊಳಿಸಿದೆ.
ವ್ಯಾಪಾರಸ್ಥರಿಂದ ಸಾರ್ವಜನಿಕ ಸಂಚಾರಕ್ಕೆ ಕಿರಿಕಿರಿಯಾಗುತ್ತಿತ್ತು. ಇದನ್ನು ತಪ್ಪಿಸಲು ಶಿವಮೊಗ್ಗ ಮಹಾನಗರ ಪಾಲಿಕೆ ಈ ಕ್ರಮ ಕೈಗೊಂಡಿದೆ. ಈ ಹಿಂದೆ ಎರಡು ರಸ್ತೆಗಳಲ್ಲಿ ವ್ಯಾಪಾರವನ್ನು ನಿಷೇಧಿಸಲಾಗಿದೆ.