ಕರ್ನಾಟಕ

karnataka

ETV Bharat / state

ಶಿವಮೊಗ್ಗದಲ್ಲಿ ಬೀದಿ ನಾಯಿಗಳ ಹಾವಳಿ: ಪುಟ್ಟ ಬಾಲಕಿಗೆ ಕಚ್ಚಿ ಗಾಯ - ಈಟಿವಿ ಭಾರತ ಕನ್ನಡ

ನಿನ್ನೆ ಶಿವಮೊಗ್ಗದ ಭದ್ರಾವತಿ ತಾಲೂಕಿನಲ್ಲಿ ಬೀದಿ ನಾಯಿಗಳ ದಾಳಿಗೆ ಬಾಲಕನೊಬ್ಬ ಸಾವನ್ನಪ್ಪಿದ್ದು, ಇಂದು ಶಿವಮೊಗ್ಗ ನಗರದಲ್ಲಿ ಪುಟ್ಟ ಬಾಲಕಿಯ ಮೇಲೆ ಬೀದಿ ನಾಯಿಯೊಂದು ದಾಳಿ ನಡೆಸಿದೆ.

stray-dog-attacked-girl-in-shivamogga
ಶಿವಮೊಗ್ಗದಲ್ಲಿ ಬೀದಿ ನಾಯಿಗಳ ಹಾವಳಿ : ಪುಟ್ಟ ಬಾಲಕಿಗೆ ಕಚ್ಚಿ ಗಾಯ

By

Published : Dec 1, 2022, 5:09 PM IST

ಶಿವಮೊಗ್ಗ : ಭದ್ರಾವತಿಯಲ್ಲಿ ನಾಯಿ‌ ದಾಳಿಗೆ ಮಗು ಸಾವನ್ನಪ್ಪಿದ ಬೆನ್ನಲ್ಲೇ ಶಿವಮೊಗ್ಗ ನಗರದಲ್ಲಿ ನಾಲ್ಕು ವರ್ಷದ ಮಗು ಮೇಲೆ ನಾಯಿ ದಾಳಿ ನಡೆಸಿದೆ. ನಗರದ ಪುರಲೆಯ ದುರ್ಗಮ್ಮ ಬೀದಿಯಲ್ಲಿ ವಾಸವಾಗಿರುವ ಅವಿನಾಶ್ ಮತ್ತು ರೇಣುಕಾ ದಂಪತಿಯ ಮಗಳಾದ ಪ್ರತೀಕ್ಷಾ ಎಂಬ ಪುಟ್ಟ ಬಾಲಕಿಯ ಮೇಲೆ ಬೀದಿ ನಾಯಿ ದಾಳಿ ನಡೆಸಿದೆ.

ಇದರಿಂದ ಬಾಲಕಿಯ ಕೈಗೆ ಗಾಯವಾಗಿದ್ದು, ಮೆಗ್ಗಾನ್​ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಪಾಲಿಕೆ ಸದಸ್ಯರಾದ ಧೀರರಾಜ್ ಹೊನ್ನವಿಲೆ ಹಾಗೂ ಪಾಲಿಕೆಯ ವೆಟರ್ನರಿ ಅಧಿಕಾರಿಗಳು ಆಸ್ಪತ್ರೆಗೆ ದೌಡಾಯಿಸಿ ಮಗುವಿನ ಆರೋಗ್ಯ ವಿಚಾರಿಸಿದ್ದಾರೆ.

ಇನ್ನು ನಗರದಲ್ಲಿ ಬೀದಿ ನಾಯಿಗಳ ಉಪಟಳ ಹೆಚ್ಚಾಗಿದ್ದು, ನಿನ್ನೆ ಬೀದಿ ನಾಯಿಗಳ ದಾಳಿಗೆ ಭದ್ರಾವತಿಯ ದಡುಮಘಟ್ಟ ಗ್ರಾಮದ ನಾಲ್ಕು ವರ್ಷದ ಬಾಲಕನೊಬ್ಬ ಮೃತಪಟ್ಟಿದ್ದ. ಈ ಬಗ್ಗೆ ನಗರ ಪಾಲಿಕೆಯು ಬೀದಿ ನಾಯಿಗಳ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಇದನ್ನೂ ಓದಿ :ಆಟವಾಡಲು ಹೊರ ಬಂದ ಬಾಲಕನ ತಲೆ ಸೀಳಿ ಮೆದುಳು ತಿಂದು ಹಾಕಿದ ಬೀದಿ ನಾಯಿಗಳು!

ABOUT THE AUTHOR

...view details