ಶಿವಮೊಗ್ಗ:ಸರ್ಕಾರ ಯಾವುದೇ ಇಲಾಖೆಯಿಂದ ಯೋಜನೆಯ ಬಗ್ಗೆ ಶಿಫಾರಸು ಮಾಡಿರುವುದು ಗೊತ್ತಿರಲಿಲ್ಲ. ಆದರೆ, ಈಗ ಸ್ವಾಭಿಮಾನ ಆಂದೋಲನ ಈ ಬಗ್ಗೆ ಒಳಚರಂಡಿ ಮಂಡಳಿಯಿಂದ ಶಿಫಾರಸು ಪ್ರತಿಯನ್ನು ನಮ್ಮ ರಾಷ್ಟ್ರೀಯ ಸ್ವಾಭಿಮಾ ಆಂದೋಲನ ಸಂಘಟನೆ ಜಿಲ್ಲಾಧ್ಯಕ್ಷ ನಂದನ್ ಹೇಳಿದ್ದಾರೆ.
ಲಿಂಗನಮಕ್ಕಿ ನೀರು ಪೂರೈಕೆ ಯೋಜನೆ ಕೈಬಿಡಿ: ಆರ್ಎಸ್ಎ ಜಿಲ್ಲಾಧ್ಯಕ್ಷ ನಂದನ್ - undefined
ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರಿಗೆ ನೀರು ಪೂರೈಸುವ ಯೋಜನೆಯ ಶಿಫಾರಸ್ನ್ನು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಅಧಿಕೃತವಾಗಿ ಹೊರಡಿಸಲಾಗಿದೆ. ಇದರಿಂದ ಯಾವುದೇ ಹಾನಿಯಿಲ್ಲ ಎನ್ನಲಾಗಿದೆ. ಆದರೆ ಈ ಯೋಜನೆ ಅವೈಜ್ಞಾನಿಕವಾಗಿದೆ ಹಾಗೂ ಕಾಡು, ನಾಡಿಗೆ ಹಾನಿಯುಂಟಾಗಲಿದೆ ಎಂದು ಶಿವಮೊಗ್ಗ ಜಿಲ್ಲೆಯಲ್ಲಿ ಆಕ್ಷೇಪ ವ್ಯಕ್ತವಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಎನ್ ತ್ಯಾಗರಾಜು ಅವರ ಅಧ್ಯಕ್ಷತೆಯಲ್ಲಿ ರಚಿಸಿದ ತಜ್ಞರ ಸಮಿತಿ ಸರ್ಕಾರಕ್ಕೆ ತನ್ನ ವರದಿ ನೀಡಿದೆ. ಬೆಂಗಳೂರು ಜಲ ಮಂಡಳಿಯ ಮುಖ್ಯ ಅಭಿಯಂತರರು ವರದಿಯನ್ನು ಪ್ರಸ್ತಾಪಿಸಿ, ಲಿಂಗನಮಕ್ಕಿ ಜಲಾಶಯ ಬೆಂಗಳೂರಿನಿಂದ ಸುಮಾರು 300 ಕಿಲೋಮೀಟರ್ ದೂರದಲ್ಲಿದೆ. ಅಲ್ಲಿಂದ ಯಗಚಿ ಜಲಾಶಯಕ್ಕೆ 130 ಕಿಲೋಮೀಟರ್ ದೂರವಿರುತ್ತದೆ. ಹಾಗೂ 410 ಮೀಟರ್ ಎತ್ತರಕ್ಕೆ ಪಂಪ್ ಮಾಡಬೇಕಾಗುತ್ತದೆ ಅಲ್ಲಿಂದ 170 ಕಿಲೋಮೀಟರ್ ದೂರ ಇರುವ ಬೆಂಗಳೂರಿಗೆ ಗುರುತ್ವಾಕರ್ಷಣೆ ಮೂಲಕ ನೀರು ಸರಬರಾಜು ಮಾಡಬಹುದು ಎಂದು ತಜ್ಞರ ಸಮಿತಿ ತಿಳಿಸಿದೆ. ವರದಿ ಪ್ರಕಾರ ಪೈಪ್ಲೈನ್ಗಳು ಯಾವುದೇ ಕಾಡು ಪ್ರದೇಶದಲ್ಲಿ ಹಾದು ಹೋಗದೆ ಪಶ್ಚಿಮ ಘಟ್ಟದ ಬೆಟ್ಟಗಳ ಮೇಲೆ ಹಾದು ಹೋಗುತ್ತವೆ. ಆದ್ದರಿಂದ ಪ್ರಸ್ತಾವನೆ ವೈಜ್ಞಾನಿಕವಾಗಿದ್ದು ಇದರಿಂದ ಪರಿಸರ ನಾಶವಾಗುವುದಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ. ಆದರೆ ಈ ಯೋಜನೆ ಅವೈಜ್ಞಾನಿಕವಾಗಿದೆ. ಈ ಯೋಜನೆಯಿಂದ ಕಾಡು ನಾಡು ನಶಿಸುತ್ತದೆ. ಹಾಗಾಗಿ ಈ ಯೋಜನೆ ಕೈ ಬೀಡಬೇಕು ಎಂದು ಒತ್ತಾಯಿಸಿದರು.
2013ರ ಸಾಲಿನಲ್ಲಿ ನಡೆದಿದ್ದ ಯೋಜನೆ ಸಿದ್ಧತೆ ಸುಮಾರು 12,500 ಕೋಟಿ ರೂ. ವೆಚ್ಚದ್ದಾಗಿದೆ. 2015ರಲ್ಲಿ ಬೆಂಗಳೂರು ಜಲಮಂಡಳಿ ಕಾರ್ಯತಂತ್ರ ಹೆಣೆದಿದ್ದು, 2050ಕ್ಕೆ ಹೊಂದಿಕೊಳ್ಳುವಂತೆ ಯೋಜನೆ ರೂಪಿಸಲಾಗಿದೆ ಎಂಬ ವಿವರಗಳು ಇದರಲ್ಲಿವೆ. ಇದಕ್ಕೆ ಭಾರಿ ಮೊತ್ತದ ಹಣ ವ್ಯಯಿಸಲಾಗುತ್ತಿದೆ. ಮುಂದೆ ಹಂತ ಹಂತವಾಗಿ ಇದನ್ನು ಬೆಳೆಸಿಕೊಂಡು ಹೋಗುವ ಉದ್ದೇಶವಿದ್ದು, ಹಣ ಲೂಟಿ ಮಾಡಿದರು ಆಶ್ಚರ್ಯ ಪಡಬೇಕಿಲ್ಲ. ಈ ಯೋಜನೆಯ ಭಾಗವಾಗಿ ಪೈಪ್ ಲೈನ್ಗಾಗಿ 30 ಮೀಟರ್ ಅಗಲ ಕೊರೆಯಲಾಗುತ್ತೆ. ಅಂದರೆ ಸುಮಾರು 400 ಕಿ.ಮೀ ದೂರ ಹೀಗೆ ಕೊರೆದರೆ ಪರಿಸರ ನಾಶವಾಗುವುದು ಖಚಿತ ಎಂದು ನಂದನ್ ಆತಂಕ ವ್ಯಕ್ತಪಡಿಸಿದರು.