ಕರ್ನಾಟಕ

karnataka

ETV Bharat / state

ಮಗಳ ಮೇಲೆ ನಿರಂತರ ಅತ್ಯಾಚಾರ: ತೀರ್ಥಹಳ್ಳಿಯಲ್ಲಿ ಕೀಚಕ ಮಲತಂದೆ ಬಂಧನ - ಸಾಕು ತಂದೆಯಿಂದ ಮಗಳ ಮೇಲೆ ಅತ್ಯಾಚಾರ

ಅಪ್ರಾಪ್ತೆ ಮೇಲೆ ಮಲತಂದೆ ಹಾಗೂ ಎದುರು ಮನೆಯ ಯುವಕ ಅತ್ಯಾಚಾರ ಎಸಗಿದ ಅಮಾನವೀಯ ಕೃತ್ಯ ಶಿವಮೊಗ್ಗ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

father arrested for raping minor daughter in shimogha
ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ

By

Published : Sep 7, 2021, 7:12 PM IST

Updated : Sep 7, 2021, 7:24 PM IST

ಶಿವಮೊಗ್ಗ: ತಂದೆಯಿಂದಲೇ ಮಗಳ‌ ಮೇಲೆ ನಿರಂತರ ಅತ್ಯಚಾರ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ತೀರ್ಥಹಳ್ಳಿ ತಾಲೂಕು ಮಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುಷ್ಕೃತ್ಯ ನಡೆದಿದೆ.

ಕೂಲಿ ಮಾಡಿ ಜೀವನ ನಡೆಸುತ್ತಿದ್ದ ಆರೋಪಿಗೆ ಕೆಲಸದಲ್ಲಿದ್ದಾಗ ವಿಧವೆಯೋರ್ವಳ ಪರಿಚಯವಾಗಿದೆ. ನಂತರ ಆಕೆಯನ್ನು ಮದುವೆ ಮಾಡಿಕೊಂಡು ಆಕೆ ಜೊತೆಗೆ ಆರೋಪಿಯು ವಾಸವಿದ್ದ ಎನ್ನಲಾಗ್ತಿದೆ. ಈ ಮಹಿಳೆಗೆ ಅಪ್ರಾಪ್ತ ವಯಸ್ಸಿನ ಮಗಳು ಸಹ ಇದ್ದಾಳೆ. ತಾಯಿ ಕೂಲಿ ಕೆಲಸಕ್ಕೆ ಹೋದಾಗ ಮಲತಂದೆ ಬಾಲಕಿಯ ಮೇಲೆ‌ ಮಗಳೆಂದು‌ ನೋಡದೇ ನಿರಂತರ ಅತ್ಯಾಚಾರ ಎಸಗಿದ್ದಾನೆ.

ಬಾಲಕಿ ಶಾಲೆಗೆ ತೆರಳಲು ಪ್ರಾರಂಭಿಸಿದಾಗ ಆಕೆಯಲ್ಲಾದ ಬದಲಾವಣೆ ಕಂಡು ಶಾಲೆಯ ಶಿಕ್ಷಕಿಯರು ಪರೀಕ್ಷೆ ನಡೆಸಿದಾಗ ತಂದೆಯ ಪಾಪಿ‌ ಕೃತ್ಯ ಬಯಲಾಗಿದೆ. ಈ ವೇಳೆ ಮಲತಂದೆ ಮಾತ್ರವಲ್ಲದೇ ಎದುರು ಮನೆಯ ಯುವಕ ಸಹ ಅತ್ಯಾಚಾರ ಎಸಗಿರುವುದು ಬಾಲಕಿಯ ಹೇಳಿಕೆಯಿಂದ ಬಯಲಾಗಿದೆ.

ಮಾಳೂರು ಪೊಲೀಸರು ಪೋಕ್ಸೋ ಕಾಯ್ದೆಯಡಿ ಇಬ್ಬರನ್ನು ಬಂಧಿಸಿ, ಜೈಲಿಗೆ ಕಳುಹಿಸಿದ್ದಾರೆ.

ಇದನ್ನೂ ಓದಿ:ಪ್ರಿನ್ಸಿಪಾಲನಾ ಇಲ್ಲ ಪೋಲಿನಾ.. ಸಮವಸ್ತ್ರ ಹಾಕದ ವಿದ್ಯಾರ್ಥಿನಿಯರಿಗೆ ಬಟ್ಟೆಬಿಚ್ಚಿ ಎಂದ ಪ್ರಾಂಶುಪಾಲ..

Last Updated : Sep 7, 2021, 7:24 PM IST

ABOUT THE AUTHOR

...view details