ಕರ್ನಾಟಕ

karnataka

ETV Bharat / state

ಸಚಿವ ಸಂಪುಟದ ಸರ್ಕಸ್ ಬಿಟ್ಟು ರಾಜ್ಯದ ಜನರ ಕಡೆ ಗಮನ ಹರಿಸಿ: ಬಸವರಾಜಪ್ಪ ಆಗ್ರಹ - ಹೆಚ್.ಆರ್ ಬಸವರಾಜಪ್ಪ ಸುದ್ದಿಗೋಷ್ಠಿ

ಸಚಿವ ಸಂಪುಟದ ಸರ್ಕಸ್ ಬಿಟ್ಟು ರಾಜ್ಯದ ಜನರ ಕಡೆ ಗಮನ ಹರಿಸಿ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಗೌರವಾಧ್ಯಕ್ಷ ಹೆಚ್.ಆರ್ ಬಸವರಾಜಪ್ಪ ಆಗ್ರಹಿಸಿದ್ದಾರೆ.

H.R Basavarajappa
ಹೆಚ್.ಆರ್ ಬಸವರಾಜಪ್ಪ

By

Published : Dec 12, 2019, 10:37 PM IST

ಶಿವಮೊಗ್ಗ: ಸ್ಥಿರ ಸರ್ಕಾರ ರಚನೆ ಆಗಿದೆ ಈಗಲಾದಾರೂ ಸಚಿವ ಸಂಪುಟದ ಸರ್ಕಸ್ ಬಿಟ್ಟು ರಾಜ್ಯದ ಜನರ ಕಡೆ ಗಮನ ಹರಿಸಿ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಗೌರವಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ಆಗ್ರಹಿಸಿದ್ದಾರೆ.

ಹೆಚ್.ಆರ್. ಬಸವರಾಜಪ್ಪ

ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಇಷ್ಟು ದಿನ ಸರ್ಕಾರ ಉಳಿಸಿಕೊಳ್ಳಲು ಹೋರಾಟ ನಡೆಯತಿತ್ತು. ಈಗ ಸಚಿವ ಸಂಪುಟ ರಚನೆ ಮಾಡುವ ಸರ್ಕಸ್ ಬಿಟ್ಟು ಅತಿವೃಷ್ಠಿಯಿಂದ ನಿರ್ಗತಿಕರಾಗಿರುವರ ಕಡೆ ಗಮನ ಹರಿಸಿ. ಹಾಗೂ ಬರಗಾಲದಿಂದ ಕಂಗೆಟ್ಟಿರುವ ರೈತರ ಕಡೆ ಗಮನ ಹರಿಸಿ. ರಾಜ್ಯದಲ್ಲಿ ಜನ ಸ್ಥಿರ ಸರ್ಕಾರ ಬರಲಿ ಎಂದು ಉಪ ಚುನಾವಣೆಯಲ್ಲಿ ಮತ ನೀಡಿ ಗೆಲ್ಲಿಸಿದ್ದಾರೆ. ರೈತರ ಸಮಸ್ಯೆಗಳನ್ನು ಬಗೆಹರಿಸಿ ಎಂದು ಒತ್ತಾಯಿಸಿದರು.

ಆರ್​ಸಿಇಪಿ ಒಪ್ಪಂದಕ್ಕೆ ಸದ್ಯಕ್ಕೆ ಸಹಿ ಹಾಕಿಲ್ಲ. ಆದ್ರೆ ಇದು ರೈತರಿಗೆ ಎಂದಿಗೂ ತೂಗುಕತ್ತಿಯಾಗಿದೆ. ಮುಂದೊಂದು ದಿನ ಈ ಒಪ್ಪಂದಕ್ಕೆ ಸಹಿ ಹಾಕಿದರೆ ಅಡಿಕೆ ಬೆಳೆಗಾರರು, ಹೈನುಗಾರಿಕೆ ಮಾಡುತ್ತಿರುವ ರೈತರು ಸಂಪೂರ್ಣ ಸರ್ವನಾಶವಾಗುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು.

ABOUT THE AUTHOR

...view details