ಕರ್ನಾಟಕ

karnataka

ETV Bharat / state

ರೈತರ ಪಾಲಿಗೆ ನಿರಾಶದಾಯಕ ಬಜೆಟ್: ಕೆ. ಟಿ ಗಂಗಾಧರ್ - ಬಜೆಟ್​ ಕುರಿತು ಕೆ. ಟಿ ಗಂಗಾಧರ್ ಪ್ರತಿಕ್ರಿಯೆ

ಬಹು ನಿರೀಕ್ಷಿತ ಕೇಂದ್ರ ಬಜೆಟ್ ಮಂಡನೆಯಾಗಿದೆ. ಆದರೆ, ಈ ಬಾರಿಯ ಬಜೆಟ್​ನಲ್ಲಿ ನಿರೀಕ್ಷಿಸಿದಷ್ಟು ಬಜೆಟ್ ಉತ್ತಮವಾಗಿಲ್ಲ. ಇದು ನಿರಾಶದಾಯಕ ಎಂದು ಪರಿಸರ ಹೋರಾಟಗಾರರು ಹಾಗೂ ರೈತ ಮುಖಂಡರು ಹೇಳಿದ್ದಾರೆ.

k-t-gangadhar
ಕೆ. ಟಿ ಗಂಗಾಧರ್

By

Published : Feb 1, 2022, 10:52 PM IST

ಶಿವಮೊಗ್ಗ:ಬಜೆಟ್​ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದೆವು. ಆದರೆ, ನಮ್ಮ ನಿರೀಕ್ಷೆ ಹುಸಿಯಾಗಿದೆ ಎಂದು ರಾಜ್ಯ ರೈತ ಸಂಘದ ವರಿಷ್ಠರಾದ ಕೆ. ಟಿ ಗಂಗಾಧರ್ ಹೇಳಿದ್ದಾರೆ.

ರಾಜ್ಯ ರೈತ ಸಂಘದ ವರಿಷ್ಠರಾದ ಕೆ. ಟಿ ಗಂಗಾಧರ್ ಮಾತನಾಡಿದರು

ಬಜೆಟ್ ಕುರಿತು ಮಾತನಾಡಿದ ಅವರು, 2023ಕ್ಕೆ ಸಿರಿಧಾನ್ಯ ವರ್ಷವನ್ನಾಗಿ ಆಚರಿಸುತ್ತೇವೆ. ಆದರೆ ಇವರು ರಾಗಿ ಕೊಂಡುಕೊಳ್ಳುವುದಿಲ್ಲ. ಇದು ರೈತರ ಪಾಲಿನ ನಿರಾಶದಾಯಕ ಬಜೆಟ್ ಎಂದು ಎಂದು ಅಸಮಾಧಾನ ಹೊರಹಾಕಿದರು.

ನದಿ ಜೋಡಣೆಗೆ ಸಾವಿರಾರು ಕೋಟಿ ಹಣ ಮೀಸಲಿಟ್ಟಿದ್ದಾರೆ. ಆದರೆ, ಇದರಿಂದ ಕರ್ನಾಟಕಕ್ಕೆ ಯಾವುದೇ ಪ್ರಯೋಜನವಿಲ್ಲ. ಈ ಯೋಜನೆಯಿಂದ ಲಾಭಕ್ಕಿಂತ ಪರಿಸರಕ್ಕೆ ನಷ್ಟವೇ ಉಂಟಾಗುತ್ತದೆ ಎಂದು ಪರಿಸರ ಹೋರಾಟಗಾರ ಅಜಯ್ ಶರ್ಮ ತಮ್ಮ ಅನಿಸಿಕೆ ಹಂಚಿಕೊಂಡರು.

ಓದಿ:ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

For All Latest Updates

ABOUT THE AUTHOR

...view details