ಶಿವಮೊಗ್ಗ :ಇಂದು ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ವೇಳೆ ಜೇನು ದಾಳಿಯಿಂದ ಗಾಯಗೊಂಡಿದ್ದ ವಿದ್ಯಾರ್ಥಿಗಳು ಯಶಸ್ವಿಯಾಗಿ ಪರೀಕ್ಷೆ ಬರೆದಿದ್ದಾರೆ. ನಗರದ ಮೇರಿ ಇನ್ ಮ್ಯಾಕುಲೇಟ್ ಹೈಸ್ಕೂಲ್‌ನಲ್ಲಿ ಇಂದು ಬೆಳಗ್ಗೆ ಜೇನು ದಾಳಿ ನಡೆಸಿದ್ದವು. ಈ ವೇಳೆ ಐವರು ವಿದ್ಯಾರ್ಥಿಗಳು ಸೇರಿದಂತೆ ಹತ್ತಕ್ಕೂ ಹೆಚ್ಚು ಪೋಷಕರು ಜೇನು ದಾಳಿಗೆ ಒಳಗಾಗಿದ್ದರು.
ಜೇನು ದಾಳಿಯಿಂದ ಗಾಯಗೊಂಡಿದ್ದರು ಯಶಸ್ವಿಯಾಗಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು - ಶಿವಮೊಗ್ಗದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರದ ಬಳಿ ಹೆಜ್ಜೇನು ದಾಳಿ
ನಗರದ ಮೇರಿ ಇನ್ ಮ್ಯಾಕುಲೇಟ್ ಹೈಸ್ಕೂಲ್‌ನಲ್ಲಿ ಇಂದು ಬೆಳಗ್ಗೆ ಜೇನು ದಾಳಿ ವೇಳೆ ಐವರು ವಿದ್ಯಾರ್ಥಿಗಳು ಸೇರಿದಂತೆ, ಹತ್ತಕ್ಕೂ ಹೆಚ್ಚು ಪೋಷಕರು ಜೇನು ದಾಳಿಗೆ ಒಳಗಾಗಿದ್ದರು. ಜೇನು ದಾಳಿಯಿಂದ ಗಾಯಗೊಂಡು ಚಿಕಿತ್ಸೆ ಪಡೆದು ಪರೀಕ್ಷಾ ಕೇಂದ್ರಕ್ಕೆ ಹೋಗುವುದು ವಿಳಂಬವಾಗಿದ್ದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಹೆಚ್ಚುವರಿ ಸಮಯದ ಅವಕಾಶವನ್ನು ನೀಡಲಾಗಿತ್ತು..
ಜೇನು ದಾಳಿ ನಡೆದ ಸ್ಥಳಕ್ಕೆ ಜಿಲ್ಲಾ ಸಾರ್ವಜನಿಕ ಶಿಕ್ಷಣಾಧಿಕಾರಿ ರಮೇಶ್, ಜಿಲ್ಲಾ ಪಂಚಾಯತ್ ಸಿಇಒ ಶ್ರೀಮತಿ ವೈಶಾಲಿ ಅವರು ಆಗಮಿಸಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದ್ದರು. ನಂತರ ಅವರಿಗೆ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಲಾಗಿತ್ತು. ನಾಲ್ವರು ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರದಲ್ಲಿಯೇ ಚಿಕಿತ್ಸೆ ಕೊಡಿಸಲಾಯಿತು. ಇನ್ನೋರ್ವ ವಿದ್ಯಾರ್ಥಿನಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ಬಂದು ಪರೀಕ್ಷೆ ಬರೆದರು. ಈ ವಿದ್ಯಾರ್ಥಿನಿಯ ತಂದೆ ಸಹ ಗಾಯಗೊಂಡಿದ್ದರು.
ಜೇನು ದಾಳಿಯಿಂದ ಗಾಯಗೊಂಡು ಚಿಕಿತ್ಸೆ ಪಡೆದು ಪರೀಕ್ಷಾ ಕೇಂದ್ರಕ್ಕೆ ಹೋಗುವುದು ವಿಳಂಬವಾಗಿದ್ದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಹೆಚ್ಚುವರಿ ಸಮಯದ ಅವಕಾಶವನ್ನು ನೀಡಲಾಗಿತ್ತು. ಪರೀಕ್ಷೆ ಬರೆಯಲು ಹೆಚ್ಚುವರಿ ಅವಕಾಶ ನೀಡಿದರು. ನನ್ನ ಕೈಗೆಲ್ಲಾ ಜೇನು ಕಚ್ಚಿದ ಕಾರಣ, ಅಷ್ಟೇನು ಚೆನ್ನಾಗಿ ಪರೀಕ್ಷೆ ಬರೆಯಲು ಸಾಧ್ಯವಾಗಲಿಲ್ಲ ಎಂದು ಗಾಯಗೊಂಡ ವಿದ್ಯಾರ್ಥಿನಿ ತನ್ನ ಅಳಲನ್ನು ತೋಡಿಕೊಂಡರು. ಮಕ್ಕಳಿಗೆ ಜೇನು ಕಚ್ಚಿದ ಕಾರಣ ಪರೀಕ್ಷೆ ಚೆನ್ನಾಗಿ ಬರೆಯಲು ಆಗಿಲ್ಲ ಎನ್ನುತ್ತಾರೆ ಶಿಕ್ಷಕಿ ಸುಮಯ್ಯ.