ಶಿವಮೊಗ್ಗ:ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯ ಮೂವರು ವಿದ್ಯಾರ್ಥಿಗಳು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಈ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಸಂತಸ ಹಂಚಿಕೊಂಡ ವಿದ್ಯಾರ್ಥಿನಿ ಅಭಿಷಾ ಭಟ್ ಹಾಗೂ ಕುಟುಂಬಸ್ಥರು ಸಾಗರದ ಅಭಿಷಾ ಭಟ್, ಗೋಪಾಳದ ರಾಮಕೃಷ್ಣ ಆಂಗ್ಲ ಪ್ರೌಢಶಾಲೆಯ ವಿನಯ್ ಜಿ. ಹೆಬ್ಬಾರ್ ಹಾಗೂ ತೀರ್ಥಹಳ್ಳಿ ತಾಲೂಕಿನ ತನಿಕಲ್ ಗ್ರಾಮದ ಸರ್ಕಾರಿ ಪ್ರೌಢಶಾಲೆ ಶ್ರೀಷಾ ಮೊದಲ ಸ್ಥಾನ ಪಡೆದಿದ್ದಾರೆ.
ಸಾಗರ ತಾಲೂಕು ಮಡೆಸೂರು ಗ್ರಾಮದ ಕೃಷಿಕ ಶ್ರೀಪಾದ್ ಭಟ್ ಹಾಗೂ ತಾಯಿ ಸಂಧ್ಯಾರ ಮಗಳಾದ ಅಭಿಷಾ ಭಟ್ ಸಾಗರದ ರಾಮಕೃಷ್ಣ ವಿದ್ಯಾಲಯ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಇದೀಗ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ.
ವರವಾಗಿ ಪರಿಣಮಿಸಿದ ಪರೀಕ್ಷೆ:
ಕೊರೊನಾ ಸಂಕಷ್ಟದಲ್ಲಿ ಆನ್ಲೈನ್ ಕ್ಲಾಸ್ ಮೂಲಕವೆ ಓದಿನ ಅಭಿಷಾಳಿಗೆ ತಾನು ಈ ಸಲ ರಾಜ್ಯಕ್ಕೆ ಪ್ರಥಮಳಾಗಬೇಕು ಎಂಬ ಹಂಬಲವಿತ್ತು. ಅದಕ್ಕೆ ತಕ್ಕಂತೆ ಮನೆಯಲ್ಲಿ ಉತ್ತಮ ಬೆಂಬಲ ಸಿಕ್ಕಿತ್ತು. ಒಂದು ದಿನವೂ ಆನ್ಲೈನ್ ಕ್ಲಾಸ್ ತಪ್ಪಿಸದೇ ಅಭ್ಯಾಸ ಮಾಡಿದ್ದಳು. ಎಸ್ಸೆಸ್ಸೆಎಲ್ಸಿ ಪರೀಕ್ಷೆ ನಡೆಯುತ್ತದೆಯೋ ಇಲ್ಲವೊ ಎಂಬ ಭಯದಲ್ಲಿದ್ದ ಅಭಿಷಾಳಿಗೆ ಪರೀಕ್ಷೆ ವರವಾಗಿ ಪರಿಣಮಿಸಿದೆ.
ಗ್ರಾಮೀಣ ಪ್ರತಿಭೆ:
ಸಿಕ್ಕ ಅವಕಾಶವನ್ನು ಅಭಿಷಾ ಭಟ್ ಬಳಸಿಕೊಂಡು ಗ್ರಾಮೀಣ ಮಕ್ಕಳು ಸಹ ಉತ್ತಮ ಅಂಕಗಳಿಸಬಹುದು ಎಂಬುದನ್ನು ತೋರಿಸಿದ್ದಾರೆ. ಅಭಿಷಾ ತಾನು ಕಲಿತ ಶಾಲೆಗೆ ಭೇಟಿ ನೀಡುತ್ತಿದ್ದಂತಯೆ ಶಾಲೆಯ ಶಿಕ್ಷಕರು ಸಿಹಿ ಹಂಚಿ ಹರ್ಷ ವ್ಯಕ್ತಪಡಿಸಿದ್ದಾರೆ. ಪೋಷಕರು ಸಹ ಮಗಳ ಸಾಧನೆಯ ಬಗ್ಗೆ ಸಂತಸಗೊಂಡಿದ್ದಾರೆ.
ಓದಿ: SSLC ಫಲಿತಾಂಶ ಪ್ರಕಟ: ಬೇರೆಯವರಿಂದ ಪರೀಕ್ಷೆ ಬರೆಸಿದ್ದ ವಿದ್ಯಾರ್ಥಿನಿ ಡಿಬಾರ್, ಉಳಿದವರೆಲ್ಲರೂ ಪಾಸ್
ಒಟ್ಟಾರೆ ಜಿಲ್ಲೆಯಲ್ಲಿ 429 ವಿದ್ಯಾರ್ಥಿಗಳು , 768 ವಿದ್ಯಾರ್ಥಿನಿಯರು A+ ಅಂಕ ಗಳಿದ್ದಾರೆ. 1014 ವಿದ್ಯಾರ್ಥಿಗಳು, 1468 ವಿದ್ಯಾರ್ಥಿನಿಯರು A ಗ್ರೇಡ್ನಲ್ಲಿ ಉತ್ತಿರ್ಣರಾಗಿದ್ದಾರೆ. 4,963 ವಿದ್ಯಾರ್ಥಿಗಳು, 5,085 ವಿದ್ಯಾರ್ಥಿನಿಯರು ಬಿ ಗ್ರೇಡ್ನಲ್ಲಿ ಪಾಸಾಗಿದ್ದಾರೆ. 4,807 ವಿದ್ಯಾರ್ಥಿಗಳು ಹಾಗೂ 3,519 ವಿದ್ಯಾರ್ಥನಿಯರು ಸಿ ಗ್ರೇಡ್ನಲ್ಲಿ ಪಾಸಾಗಿದ್ದಾರೆ.