ಶಿವಮೊಗ್ಗ:ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳ ಜೀವನದ ಟರ್ನಿಂಗ್ ಪಾಯಿಂಟ್ ಅಂತಾರೆ. ಇಲ್ಲಿ ಹೆಚ್ಚು ಅಂಕಗಳಿಸಿ, ಪಿಯುಸಿಯಲ್ಲಿ ಉತ್ತಮ ಕೋರ್ಸ್ ಆಯ್ಕೆ ಮಾಡಿ ಕೊಂಡ್ರೆ ಒಳ್ಳೆಯ ಜೀವನ ಕಟ್ಟಿ ಕೊಳ್ಳಬಹುದು. ಆದ್ರೆ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಬೇಕಾದ ಎಸ್ಎಸ್ಎಲ್ಸಿ ಬೋರ್ಡ್ ವಿದ್ಯಾರ್ಥಿಗಳ ಜೀವನದಲ್ಲಿ ಚೆಲ್ಲಾಟವಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ವಿದ್ಯಾರ್ಥಿಗೆ ಅಂಕ ನೀಡಲು ಎಸ್ಎಸ್ಎಲ್ ಸಿ ಬೋರ್ಡ್ ಚೌಕಾಸಿ: ಪೋಷಕರು ಗರಂ - kannadanews
ಎಸ್ಎಸ್ಎಲ್ಸಿ ಪರೀಕ್ಷಾ ಮಂಡಳಿ ಯಡವಟ್ಟಿನಿಂದಾಗಿ ಶಿವಮೊಗ್ಗದ ವಿದ್ಯಾರ್ಥಿ ಹೆಚ್ಚಿಗೆ ಅಂಕಗಳಿಸಿದ್ದರೂ ಅದನ್ನು ಪಡೆಯಲಾಗದೇ ಸಂಕಷ್ಟಕ್ಕೆ ಒಳಗಾಗುವಂತಾಗಿದೆ.
ಶಿವಮೊಗ್ಗದ ಸಾಗರ್.ಬಿ.ಎಲ್ ಎಂಬ ವಿದ್ಯಾರ್ಥಿ ಎಸ್ಎಸ್ಎಲ್ ಸಿ ಪರೀಕ್ಷೆ ಬರೆದು ಪಾಸಾಗಿದ್ದಾನೆ. ಆದ್ರೆ, ಈತನ ಗಣಿತ ಉತ್ತರ ಪತ್ರಿಕೆಯಲ್ಲಿ ಬೋರ್ಡ್ ನ ಮೌಲ್ಯ ಮಾಪನದಲ್ಲಿ ಎಡವಟ್ಟು ಮಾಡಿದೆ. ಸಾಗರ್ ಗಣಿತದಲ್ಲಿ 42 ಅಂಕಗಳಿಸಿದ್ದಾನೆ ಎಂದು ಮಾರ್ಕ್ಸ್ ಕಾರ್ಡಿನಲ್ಲಿ ಬರೆಯಲಾಗಿದೆ. ಆದರೆ, ಪ್ರತೀ ಪೇಜ್ನಲ್ಲಿಯೂ ಪಡೆದಿರುವ ಅಂಕಗಳನ್ನು ಎಣಿಸಿದರೆ ಟೋಟಲ್ 49 ಮಾರ್ಕ್ಸ್ ಗಳು ಬರುತ್ತಿವೆ. ಇದರಿಂದ ಗೊಂದಲಕ್ಕೊಳಗಾದ ಸಾಗರನ ಪೋಷಕರು ಸಾಗರ್ನ ಗಣಿತ ಉತ್ತರ ಪತ್ರಿಕೆ ಮರು ಮೌಲ್ಯಮಾಪನಕ್ಕೆ ಹಾಕಿದ್ದರು.
ಈ ವೇಳೆ ಸಾಗರನಿಗೆ 2 ಅಂಕಗಳು ಹೆಚ್ಚಿಗೆ ಬಂದಿವೆ. ಈ ಕುರಿತು ತಮ್ಮ ಮಗನಿಗೆ ಹೆಚ್ಚು ಅಂಕ ಬಂದಿದೆ ಎಂದು ಸಾಗರನ ಪೋಷಕರು ಎಸ್ಎಸ್ಎಲ್ಸಿ ಬೋರ್ಡ್ ನವರನ್ನು ಪ್ರಶ್ನೆ ಮಾಡಿದ್ದರು. ಆದರೆ ಅವರು, ಈಗ ಬಂದಿರುವುದೇ ಜಾಸ್ತಿ ಸಾಕು ಹೋಗಿ ಎಂದು ಉದಾಸೀನ ತೋರಿದ್ದಾರೆ ಎಂಬು ಪೋಷಕರು ಆರೋಪ. ಅಷ್ಟೇ ಅಲ್ಲ ಆ ಹೆಚ್ಚಿನ ಅಂಕಗಳನ್ನು ಸರಿಯಾಗಿ ಕೊಟ್ಟಿದ್ರೆ ಮುಂದೆ ತಮ್ಮ ಮಗನಿಗೆ ಅನುಕೂಲವಾಗುತ್ತಿತ್ತು ಎಂಬುದು ಸಾಗರ್ ಪೋಷಕರ ವಾದವೂ ಆಗಿದೆ.