ಶಿವಮೊಗ್ಗ: ರಾಜ್ಯಾದ್ಯಂತ ಬಿಜೆಪಿ ಸರ್ಕಾರ ಕಾಂಗ್ರೆಸ್ ಕಾರ್ಯಕರ್ತರಿಗೆ ಕಿರುಕುಳ ನೀಡುತ್ತಿದೆ. ಇದರ ವಿರುದ್ಧ ನಮ್ಮ ಹೋರಾಟವನ್ನು ಶಿವಮೊಗ್ಗದಿಂದ ಪ್ರಾರಂಭಿಸುತ್ತಿದ್ದೇವೆ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಗುಡುಗಿದ್ದಾರೆ.
ಶ್ರೀರಾಮ ಬಿಜೆಪಿ ಸ್ವತ್ತಲ್ಲ, ನಾವೆಲ್ಲಾ ಶ್ರೀರಾಮನ ಮಕ್ಕಳು: ಡಿ.ಕೆ.ಶಿವಕುಮಾರ್ - dks
ಬಿಜೆಪಿ ಸರ್ಕಾರ ನಮ್ಮ ಕಾರ್ಯಕರ್ತರ ವಿರುದ್ಧ ವಿನಾ ಕಾರಣ ಕೇಸ್ ದಾಖಲಿಸುತ್ತಿದೆ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಡಿಕೆಶಿ, ನಮ್ಮ ಕಾರ್ಯಕರ್ತರಿಗೆ ಯಾರೇ ಕಿರುಕುಳ ನೀಡಿದ್ರು ಅಲ್ಲಿಂದಲೇ ನಮ್ಮ ಹೋರಾಟ ನಡೆಸುತ್ತೇವೆ. ಎಸ್ಐಟಿ ತನಿಖೆ ಸರಿಯಾಗಿ ನಡೆಯಬೇಕಿದೆ. ಅದಕ್ಕೂ ಮೊದಲು ಈಗ ಸಿಕ್ಕಿರುವ ಸಿಡಿ ನಕಲಿಯೋ ಅಸಲಿಯೋ ಎಂದು ತಿಳಿಯಬೇಕಿದೆ. ತನಿಖೆ ಸರಿಯಾಗಿ ನಡೆದರೆ ಸತ್ಯಾಂಶ ಹೊರ ಬರುತ್ತದೆ. ಒಂದು ಸುಳ್ಳನ್ನು ನೂರು ಬಾರಿ ಹೇಳಬೇಕು ಎಂದು ಹೇಳಿದ ಈಶ್ವರಪ್ಪನವರಿಂದ ನಾವೇನೂ ಕಲಿಯಬೇಕಿಲ್ಲ.
ಶ್ರೀರಾಮ ಕೇವಲ ಬಿಜೆಪಿಯವರ ಸ್ವತ್ತಲ್ಲ. ಶ್ರೀರಾಮ ನಮ್ಮವನು, ನಾವೆಲ್ಲಾ ಅವರ ಮಕ್ಕಳು ಎಂದರು. ಇನ್ನು ಜಾರಕಿಹೊಳಿ ಸಿಡಿಯನ್ನು ಕಾಂಗ್ರೆಸ್ನವರೇ ಮಾಡಿಸಿದ್ದಾರೆ ಎಂಬ ಆರೋಪಕ್ಕೆ ಉತ್ತರಿಸಿದ ಶಿವಕುಮಾರ್, ಇದು ಸಹ ತನಿಖೆಯಾಗಲಿ ಎಂದಿದ್ದಾರೆ.