ಕರ್ನಾಟಕ

karnataka

ETV Bharat / state

ಸಿಎಂ ನಿವಾಸಕ್ಕೆ ಶ್ರೀಶೈಲ ಶ್ರೀಗಳ ಭೇಟಿ: ಬಿ.ವೈ ರಾಘವೇಂದ್ರ ದಂಪತಿಯಿಂದ ಪಾದಪೂಜೆ

ಶ್ರೀಶೈಲ ಪೀಠದ ಪೀಠಾಧಿಪತಿಗಳು ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಹಾಲಿ ರಾಜಕೀಯ ಏರುಪೇರಿನಲ್ಲಿ ಶ್ರೀಶೈಲ ಶ್ರೀಗಳ ಭೇಟಿ ರಾಜಕೀಯ ಚರ್ಚೆಗೆ ಕಾರಣವಾಗಿದೆ.

sri-shaila-peeta-swamiji-visits-c-m-bsy-house-in-shimoga
ಶ್ರೀಶೈಲ ಪೀಠದ ಪೀಠಾಧಿಪತಿಗಳಿಂದ ಆರ್ಶೀವಾದ

By

Published : Jul 18, 2021, 3:26 PM IST

ಶಿವಮೊಗ್ಗ:ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಅವರ ಶಿಕಾರಿಪುರ‌ ನಿವಾಸಕ್ಕೆ ಶ್ರೀಶೈಲ ಪೀಠದ ಪೀಠಾಧಿಪತಿಗಳು ಭೇಟಿ ನೀಡಿದ್ದರು. ಈ ವೇಳೆ ಮನೆಯಲ್ಲಿದ್ದ ಸಿಎಂ ಪುತ್ರ ಸಂಸದ ಬಿ.ವೈ.ರಾಘವೇಂದ್ರ ತಮ್ಮ ಪತ್ನಿ ಹಾಗೂ ಪುತ್ರರ ಸಮೇತ ಶ್ರೀಗಳ ಪಾದಪೂಜೆ ನೆರವೇರಿಸಿದರು.

ಶ್ರೀಶೈಲ ಪೀಠದ ಪೀಠಾಧಿಪತಿಗಳ ಪಾದಪೂಜೆ ಮಾಡಿದ ಸಂಸದ ಬಿ.ವೈ.ರಾಘವೇಂದ್ರ

ಪಾದಪೂಜೆಯ ನಂತರ ಯಡಿಯೂರಪ್ಪ ಅವರ ಕುಟುಂಬಸ್ಥರಿಗೆ ಶ್ರೀಗಳು ಆಶೀರ್ವಾದ ಮಾಡಿದರು. ದೇಶದ ಪಂಚಪೀಠಗಳಲ್ಲಿ ಒಂದಾದ ಆಂಧ್ರದ ಶ್ರೀಶೈಲ ಪೀಠ ಅಪಾರ ಭಕ್ತರನ್ನು ಹೊಂದಿದೆ. ಹಾಲಿ ರಾಜಕೀಯ ಏರುಪೇರಿನಲ್ಲಿ ಶ್ರೀಶೈಲ ಶ್ರೀಗಳ ಭೇಟಿ ಹಲವು ರಾಜಕೀಯವಾಗಿ ಕುತೂಹಲಕ್ಕೆ ಕಾರಣವಾಗಿದೆ.

ಶ್ರೀಶೈಲ ಶ್ರೀಗಳ ಭೇಟಿಯ ವೇಳೆ ಮಲೆನಾಡು ಅಭಿವೃದ್ದಿ ಮಂಡಳಿಯ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಈ ವೇಳೆ ಹಾಜರಿದ್ದರು. ಕಳೆದ ವಾರ ರಂಭಾಪುರಿ ಶ್ರೀಗಳು ಭೇಟಿ‌ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು.

ಇದನ್ನೂ ಓದಿ:ಸಿದ್ದರಾಮಯ್ಯ ಭೇಟಿಯಾದ ರಕ್ಷಾ ರಾಮಯ್ಯ : ತಮ್ಮ ಪರ ಲಾಬಿ ನಡೆಸಲು ಮನವಿ?

ABOUT THE AUTHOR

...view details