ಶಿವಮೊಗ್ಗ :ಜಿಲ್ಲಾ ಉಸ್ತುವಾರಿ ಸಚಿವ ಕೆ ಎಸ್ ಈಶ್ವರಪ್ಪನವರು ಕೊರೊನಾ ಸೋಂಕಿನಿಂದ ಗುಣಮುಖರಾಗಲೆಂದು ಹಾರೈಸಿ ಅವರು ಅಭಿಮಾನಿ ಬಳಗದ ವತಿಯಿಂದ ವಿಶೇಷ ಪೂಜೆ ಸಲ್ಲಿಸಲಾಯಿತು.
ಸಚಿವ ಈಶ್ವರಪ್ಪ ಕೊರೊನಾದಿಂದ ಗುಣಮುಖರಾಗಲೆಂದು ಅಭಿಮಾನಿಗಳಿಂದ ವಿಶೇಷ ಪೂಜೆ
ಈಶ್ವರಪ್ಪನವರಿಗೆ ಕೊರೊನಾ ಬಂದ ವಿಚಾರ ಕೇಳಿ ಬೇಸರವಾಯಿತು. ತಮ್ಮ ಕ್ಷೇತ್ರದ ಜನತೆಗೆ ಕೊರೊನಾ ಬಾರದಂತೆ ಔಷಧಿ ಹಂಚಿದ ನಾಯಕರಿಗೆ ಈಗ ಕೊರೊನಾ ಬಂದಿದೆ. ಇದರಿಂದ ನಗರದ ಆರಾಧ್ಯ ದೈವನಲ್ಲಿ ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸಿದ್ದೇವೆ..
ಸಚಿವ ಈಶ್ವರಪ್ಪ ಕೊರೊನಾದಿಂದ ಗುಣಮುಖರಾಗಲೆಂದು ಅಭಿಮಾನಿಗಳಿಂದ ವಿಶೇಷ ಪೂಜೆ
ಶಿವಮೊಗ್ಗದ ಕೋಟೆ ಆಂಜನೇಯ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ದೇವಾಲಯದ ಹೊರಗೆ ದೇವರಿಗೆ 101 ತೆಂಗಿನ ಕಾಯಿ ಹೊಡೆದು ಅವರ ಆರೋಗ್ಯಕ್ಕಾಗಿ ಹರಕೆ ತೀರಿಸಿದರು.
ಈ ವೇಳೆ ಮಾತನಾಡಿದ ಈಶ್ವರಪ್ಪ ಅಭಿಮಾನಿ ಬಳಗದ ಅರುಣ್, ಈಶ್ವರಪ್ಪನವರಿಗೆ ಕೊರೊನಾ ಬಂದ ವಿಚಾರ ಕೇಳಿ ಬೇಸರವಾಯಿತು. ತಮ್ಮ ಕ್ಷೇತ್ರದ ಜನತೆಗೆ ಕೊರೊನಾ ಬಾರದಂತೆ ಔಷಧಿ ಹಂಚಿದ ನಾಯಕರಿಗೆ ಈಗ ಕೊರೊನಾ ಬಂದಿದೆ. ಇದರಿಂದ ನಗರದ ಆರಾಧ್ಯ ದೈವನಲ್ಲಿ ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸಿದ್ದೇವೆ. ಅವರು ಶೀಘ್ರದಲ್ಲೇ ಗುಣಮುಖರಾಗುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.