ಕರ್ನಾಟಕ

karnataka

ETV Bharat / state

ಬಿಎಸ್‌ವೈ-ಅಮಿತ್ ಶಾ ಗುಣಮುಖರಾಗಲೆಂದು ಸೊರಬದಲ್ಲಿ ವಿಶೇಷ ಪೂಜೆ - Special pooja made in Sorabha

ಹೋರಾಟದ ಮೂಲಕ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದ ಬಿ ಎಸ್ ಯಡಿಯೂರಪ್ಪ ಹಾಗೂ ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರು ಕೊರೊನಾದಿಂದ ಬೇಗನೆ ಗುಣಮುಖರಾಗಲಿ ಎಂದು ಪ್ರಾರ್ಥಿಸಿದರು..

Special pooja
Special pooja

By

Published : Aug 3, 2020, 4:52 PM IST

ಶಿವಮೊಗ್ಗ :ಮುಖ್ಯಮಂತ್ರಿ ಯಡಿಯೂರಪ್ಪ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ನಾಡಿನ ಜನತೆ ಕೊರೊನಾ ಸಂಕಷ್ಟದಿಂದ ಪಾರಾಗಲಿ ಎಂದು ಪ್ರಾರ್ಥಿಸಿ ಸೊರಬದಲ್ಲಿ ವಿವಿಧ ಸಮಿತಿ ಸದಸ್ಯರು ವಿಶೇಷ ಪೂಜೆ ಸಲ್ಲಿಸಿದರು.

ಸೊರಬ ಪಟ್ಟಣದ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಇಂದು ಶ್ರೀರಾಮ ಮಂದಿರ ಶಿಲಾನ್ಯಾಸ ಉತ್ಸವ ಆಚರಣಾ ಸಮಿತಿ, ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಹಾಗೂ ಸಂಘ-ಪರಿವಾರದ ವತಿಯಿಂದ ವಿಶೇಷ ಪೊಜೆ ಸಲ್ಲಿಸಲಾಯಿತು. ಹೋರಾಟದ ಮೂಲಕ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದ ಬಿ ಎಸ್ ಯಡಿಯೂರಪ್ಪ ಹಾಗೂ ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರು ಕೊರೊನಾದಿಂದ ಬೇಗನೆ ಗುಣಮುಖರಾಗಲಿ ಎಂದು ಪ್ರಾರ್ಥಿಸಿದರು.

ಈ ವೇಳೆ ಶ್ರೀರಾಮ ಮಂದಿರ ಶಿಲಾನ್ಯಾಸ ಉತ್ಸವ ಆಚರಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಆಶಿಕ್ ನಾಗಪ್ಪ, ಉಪಾಧ್ಯಕ್ಷ ಎಂ ಕೆ ಯೋಗೇಶ್, ಸಹ ಸಂಚಾಲಕ ಸಂಜೀವ್ ಆಚಾರ್, ಪಟ್ಟಣ ಪಂಚಾಯತ್‌ ಸದಸ್ಯ ನಟರಾಜ ಉಪ್ಪಿನ, ಮಾಜಿ ಉಪಾಧ್ಯಕ್ಷೆ ಗೌರಮ್ಮ ಭಂಡಾರಿ, ಬಜರಂಗದಳದ ಜಿಲ್ಲಾ ಸಹ ಸಂಚಾಲಕ ರವಿ ಜೆ. ಗುಡಿಗಾರ್, ಮಾತೃ ಶಕ್ತಿ ಪ್ರಮುಖ್ ಎಂ ಜಿ ರೂಪದರ್ಶಿನಿ, ದುರ್ಗಾವಾಹಿನಿ ಸಂಚಾಲಕಿ ವಸಂತಿ ರಾಘವೇಂದ್ರ ನಾವುಡ, ಮಾತೃ ಮಂಡಳಿಯ ಶ್ಯಾಮಲ ಸುರೇಶ್, ಆರ್‌ಎಸ್‌ಎಸ್ ಸ್ವಯಂಸೇವಕ ಮಹೇಶ ಗೋಖಲೆ, ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಜಿಲ್ಲಾಧ್ಯಕ್ಷ ಸಿ ಪಿ ಈರೇಶ್‌ಗೌಡ, ಪ್ರಮುಖರಾದ ಹೆಚ್ ಎಸ್‌ ಯುವರಾಜ್ ಇತರರಿದ್ದರು.

ABOUT THE AUTHOR

...view details