ಕರ್ನಾಟಕ

karnataka

ETV Bharat / state

ಮರಣ, ಕಷ್ಟನಷ್ಟದ ನೋವು ನುಂಗಿ ರಾಷ್ಟ್ರಧ್ವಜ ಹಾರಿಸಿ ದೇಶ ಭಕ್ತಿ ಮೆರೆದ ಜನರು - Independence day

ಸೂತಕದ ವಾತಾವರಣವಿದ್ದ ಮನೆಯಲ್ಲಿಯೂ ತಿರಂಗಾ ಹಾರಿಸಿ ರಾಷ್ಟ್ರಾಭಿಮಾನ ಮೆರೆದ ಘಟನೆ ಶಿವಮೊಗ್ಗದ ಆನಂದಪುರದಲ್ಲಿ ನಡೆಯಿತು.

patriotism-in-death-house-in-shivamogga
ಸೂತಕದ ಮನೆಗಳಲ್ಲೂ ರಾಷ್ಟ್ರಪ್ರೇಮ: ರಾಷ್ಟ್ರಧ್ವಜ ಹಾರಿಸಿದ ದೇಶ ಭಕ್ತರು

By

Published : Aug 14, 2022, 7:48 AM IST

ಶಿವಮೊಗ್ಗ: ಕುಟುಂಬದ ವ್ಯಕ್ತಿಯೊಬ್ಬರು ಸಾವಿಗೀಡಾಗಿ ಮನೆಯಲ್ಲಿ ಸೂತಕದ ಛಾಯೆ ಆವರಿಸಿತ್ತು. ಈ ನೋವು ನುಂಗಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಮನೆಯಲ್ಲಿ ತಿರಂಗಾ ಹಾರಿಸಿದ್ದಾರೆ. ಇಂಥದ್ದೇ ಮತ್ತೆರಡು ಘಟನೆಗಳು ಜಿಲ್ಲೆಯಯಲ್ಲಿ ಕಂಡುಬಂತು.

ಸಾಗರ ತಾಲೂಕಿನ ಆನಂದಪುರಂನ ಅಶೋಕ ರಸ್ತೆಯ ಸಾಮಾಜಿಕ ಕಾರ್ಯಕರ್ತರಾದ ರಂಗನಾಥ್ ಅವರ ತಾಯಿ ನಿನ್ನೆ ಮೃತಪಟ್ಟಿದ್ದರು. ಈ ನೋವಿನ ಸಂದರ್ಭದಲ್ಲೂ ಅವರು ತಮ್ಮ ಮನೆಯ ಮೇಲೆ ತಿರಂಗಾ ಹಾರಿಸಿ ಗಮನ ಸೆಳೆದರು. ಇನ್ನೊಂದೆಡೆ, ಇದೇ ಗ್ರಾಮದ ಯೋಧ ಸಂದೀಪ್ ಶೆಟ್ಟಿ ಎಂಬವರ ತಂದೆ ನಾಗರಾಜ ಶೆಟ್ಟಿ ಮೃತಪಟ್ಟಿದ್ದರು. ಅಂತಿಮ ಸಂಸ್ಕಾರಕ್ಕೆಂದು ಸಂದೀಪ್ ಶೆಟ್ಟಿ ಊರಿಗೆ ಆಗಮಿಸಿದ್ದರು. ಅವರೂ ಕೂಡಾ ತಮ್ಮ ಮನೆಯಲ್ಲಿ ರಾಷ್ಟ್ರಧ್ವಜ ಹಾರಿಸುವ ಮೂಲಕ ದೇಶಾಭಿಮಾನ ಮೆರೆದರು.

ದೇಶಾಭಿಮಾನ ಮೆರೆದ ಯೋಧ

ಆಚಾಪುರದ ಗ್ರಾಮದ ಫಾತಿಮಾ ಎಂಬುವರ ಮನೆ ಕಳೆದ ವಾರ ಸುರಿದ ಭಾರಿ ಮಳೆಗೆ ಬಿದ್ದು ಹಾನಿಗೊಳಗಾಗಿತ್ತು. ಆದರೆ ಫಾತಿಮಾ, ಹಾನಿಯಾದ ಮನೆಯ ಮುಂದೆ ತ್ರಿವರ್ಣ ಧ್ವಜ ಹಾರಿಸಿದರು.

ಇದನ್ನೂ ಓದಿ :ವಿಚ್ಛೇದನಕ್ಕೆ ಬಂದಿದ್ದ ಮೂರು ಜೋಡಿ ಒಂದುಗೂಡಿಸಿದ ಲೋಕ ಅದಾಲತ್.. ಸಿಹಿ ತಿನಿಸಿ ನಗು ಬೀರಿದ ದಂಪತಿಗಳು

ABOUT THE AUTHOR

...view details