ಶಿವಮೊಗ್ಗ: ತಮನ್ನು ತಾವು ಅಪವಿತ್ರರು ಎಂದು ಕರೆದುಕೊಂಡ ಸರ್ಕಾರ ಹೋಗಿ, ಸಂವೇದನಾ ಶೀಲ ಹಾಗೂ ಜನಪರ ಕಾಳಜಿ ಇರುವ ಸರ್ಕಾರ ಆಡಳಿತಕ್ಕೆ ಬಂದಿದೆ ಎಂದು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಹೇಳಿದರು.
ಸಂವೇದನಾಶೀಲ, ಜನಪರ ಕಾಳಜಿ ಇರುವ ಪಕ್ಷ ಎಂದರೆ ಅದು ಬಿಜೆಪಿ: ಬಿ.ಎಲ್. ಸಂತೋಷ್ - ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಬಿ. ಎಲ್. ಸಂತೋಷ್
ತಮನ್ನು ತಾವು ಅಪವಿತ್ರರು ಎಂದು ಕರೆದುಕೊಂಡ ಸರ್ಕಾರ ಹೋಗಿ, ಸಂವೇದನಾ ಶೀಲ ಹಾಗೂ ಜನಪರ ಕಾಳಜಿ ಇರುವ ಸರ್ಕಾರ ಆಡಳಿತಕ್ಕೆ ಬಂದಿದೆ ಎಂದು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಹೇಳಿದರು.
![ಸಂವೇದನಾಶೀಲ, ಜನಪರ ಕಾಳಜಿ ಇರುವ ಪಕ್ಷ ಎಂದರೆ ಅದು ಬಿಜೆಪಿ: ಬಿ.ಎಲ್. ಸಂತೋಷ್ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಬಿ. ಎಲ್. ಸಂತೋಷ್, Special meeting with Mandal activists headed by BL Santosh](https://etvbharatimages.akamaized.net/etvbharat/prod-images/768-512-6094010-thumbnail-3x2-nin.jpg)
ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಬಿ. ಎಲ್. ಸಂತೋಷ್
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನೂತನ ಮಂಡಲ ಕಾರ್ಯಕರ್ತರೊಂದಿಗೆ ವಿಶೇಷ ಸಭೆ ನಡೆಸಿ ಮಾತನಾಡಿದ ಅವರು, ಬದಲಾಗುವ ರಾಜಕೀಯ ಪರಿಸ್ಥಿತಿಯಲ್ಲಿ ಬದಲಾಗದೇ ಇರುವ ರಾಜಕೀಯ ಪಕ್ಷ ಎಂದರೆ ಭಾರತೀಯ ಜನತಾ ಪಕ್ಷ ಎಂದರು.
ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಬಿ. ಎಲ್. ಸಂತೋಷ್
ಸಂವೇದನಾ ರಹಿತವಾಗಿರುವ ಹಾಗೂ ಕೇಲವರು ಮಾತ್ರ ಸಮಾಜದ ಪ್ರಜೆಗಳು ಎಂದು ತಿಳಿದಿದ್ದಂತಹ ಹಾಗೂ ತಮನ್ನ ತಾವೇ ಅಪವಿತ್ರರೂ ಎಂದು ಕೊಂಡಿದಂತಹ ಸರ್ಕಾರ ಹೋಗಿ ಸಂವೇದನಾ ಶೀಲ ಹಾಗೂ ಜನಪರ ಕಾಳಜಿ ಸರ್ಕಾರ ಆಡಳಿತಕ್ಕೆ ಬಂದಿದೆ ಎಂದ ಅವರು, ಜನಪ್ರತಿನಿಧಿಗಳು ಹಾಗೂ ಪಧಾಧಿಕಾರಿಗಳು ಪಕ್ಷದ ಜೋಡೆತ್ತುಗಳಿದ್ದ ಹಾಗೇ ಪಕ್ಷವನ್ನು ಸಂಘಟಿಸುವ ಕೇಲಸ ನಿಮ್ಮಿಂದ ಆಗಬೇಕು ಎಂದರು.