ಕರ್ನಾಟಕ

karnataka

ಶಿವಮೊಗ್ಗ ಪೊಲೀಸರಿಂದ ಸ್ಪೆಷಲ್ ಡ್ರೈವ್: ಮಾರಕಾಸ್ತ್ರ ಪತ್ತೆ

By

Published : Jul 27, 2022, 9:58 PM IST

ಶಿವಮೊಗ್ಗದಲ್ಲಿ ಪೊಲೀಸ್ ಸ್ಪೆಷಲ್ ಡ್ರೈವ್ ಸಂಚಲನ ಸೃಷ್ಟಿಸಿದೆ. ಈ ವೇಳೆ ಪೊಲೀಸರು ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

Special drive by Shimoga Police
Special drive by Shimoga Police

ಶಿವಮೊಗ್ಗ: ಶಿವಮೊಗ್ಗದಲ್ಲಿ ಪೊಲೀಸರು ನಡೆಸುತ್ತಿರುವ ವಿಶೇಷ ತಪಾಸಣೆ ಸಂದರ್ಭ ತಲವಾರ್ ಹಾಗೂ ಡ್ಯಾಗರ್​​ಗಳು ಪತ್ತೆಯಾಗಿವೆ. ಒಂದು ತಲವಾರ್ ಹಾಗೂ ನಾಲ್ಕು ಡ್ಯಾಗರ್ ಪತ್ತೆಮಾಡಿ ಕಾನೂನು ಪೊಲೀಸರು ಕ್ರಮ ಜರುಗಿಸಿದ್ದಾರೆ.

ಶಿವಮೊಗ್ಗ ಪೊಲೀಸರಿಂದ ಸ್ಪೆಷಲ್ ಡ್ರೈವ್

ಶಿವಮೊಗ್ಗದಲ್ಲಿ ಪೊಲೀಸ್ ಸ್ಪೆಷಲ್ ಡ್ರೈವ್ ಸಂಚಲನ ಸೃಷ್ಟಿಸಿದೆ. ಕೇವಲ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಲ್ಲದೇ ವಿವಿಧ ಪ್ರಕರಣ ದಾಖಲಿಸಿದ ಪೊಲೀಸರು ಕಂಬಿ ಹಿಂದೆ ಕೂರಿಸುವ ಕೆಲಸಕ್ಕೆ ಮುಂದಾಗಿದ್ದಾರೆ.

ಶಿವಮೊಗ್ಗ ಪೊಲೀಸರಿಂದ ಸ್ಪೆಷಲ್ ಡ್ರೈವ್

11 ಅಬಕಾರಿ ಪ್ರಕರಣ, 350 ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣ, 93 ಲಘು ಪ್ರಕರಣಗಳು, 96 ತಂಬಾಕು ಪ್ರಕರಣಗಳು, 10 ಮಂದಿ ಗಾಂಜಾ ಸೇವನೆ ಮಾಡಿದವರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಕೇವಲ ಒಂದು ಗಂಟೆ ನಡೆದ ಪೊಲೀಸರ ಸ್ಪೆಷಲ್ ಡ್ರೈವ್ ನಲ್ಲಿ ಇಡೀ ನಗರವೇ ಒಂದು ಗಂಟೆ ಸ್ತಬ್ಧವಾಗಿತ್ತು.

ಶಿವಮೊಗ್ಗ ಪೊಲೀಸರಿಂದ ಸ್ಪೆಷಲ್ ಡ್ರೈವ್

ಇದನ್ನೂ ಓದಿ: ಕಾಬೂಲ್‌ನ ಗುರುದ್ವಾರ ಸಾಹಿಬ್ ಬಳಿ ಮತ್ತೊಂದು ಬಾಂಬ್ ಸ್ಫೋಟ

ABOUT THE AUTHOR

...view details