ಕರ್ನಾಟಕ

karnataka

ETV Bharat / state

ಪೇದೆಯ ಸಮಯ ಪ್ರಜ್ಞೆ ಉಳಿಸಿತು ಜೀವ : ಎಸ್​​​ಪಿ ಶಾಂತರಾಜ ಶ್ಲಾಘನೆ - ಶಿವಮೊಗ್ಗದ ಪೊಲೀಸ್​ ಪೇದೆ ಸುದ್ದಿ

ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ವ್ಯಕ್ತಿಯನ್ನು ರಕ್ಷಿಸಿ ಸಮಯ ಪ್ರಜ್ಞೆ  ಮೆರೆದ ಸಾಗರ ಟೌನ್ ಪೊಲೀಸ್ ಠಾಣೆಯ ಪೇದೆ ಹರೀಶ್ ಅವರಿಗೆ ಎಸ್​​​ಪಿ ಶಾಂತರಾಜ  ನಗದು ಬಹುಮಾನ ನೀಡಿ ಕರ್ತವ್ಯಕ್ಕೆ ಪ್ರೋತ್ಸಾಹಿಸಿದ್ದಾರೆ.

ಪೇದೆ

By

Published : Nov 13, 2019, 4:06 PM IST

ಶಿವಮೊಗ್ಗ: ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ವ್ಯಕ್ತಿಯನ್ನು ರಕ್ಷಿಸಿ ಸಮಯ ಪ್ರಜ್ಞೆ ಮೆರೆದ ಸಾಗರ ಟೌನ್ ಪೊಲೀಸ್ ಠಾಣೆಯ ಪೇದೆ ಹರೀಶ್ ಅವರಿಗೆ ಎಸ್​​​ಪಿ ಶಾಂತರಾಜ ನಗದು ಬಹುಮಾನ ನೀಡಿ ಕರ್ತವ್ಯಕ್ಕೆ ಪ್ರೋತ್ಸಾಹಿಸಿದ್ದಾರೆ.

ನವೆಂಬರ್ 11 ರಂದು ಸಾಗರ ಟೌನ್ ಪೊಲೀಸ್ ಠಾಣೆಯ ಪೇದೆ ಹರೀಶ್ ಮತ್ತು ಹೋಂ ಗಾರ್ಡ್ ಎಸ್​.ಟಿ.ಮಂಜಪ ರಾತ್ರಿ 5 ನೇ ನೈಟ್ ಬೀಟ್​ನಲ್ಲಿದ್ದರು. ಮಧ್ಯರಾತ್ರಿ 12 ರಿಂದ 12-15 ರ ನಡುವಿನ ಸಮಯದಲ್ಲಿ ಹೋಟೆಲ್ ಬಳಿ ಪೊಲೀಸ್ ಬಿಟ್ ಪಾಯಿಂಟ್ ನೋಟ್ ಬುಕ್ ಗೆ ಸಹಿ ಮಾಡಲು ಹೋದಾಗ ಹೋಟೆಲ್ ಮಾಲೀಕ ರಮೇಶ್ (70) ಮರಕ್ಕೆ ನೇಣು ಹಾಕಿಕೊಳ್ಳಲು ಹೋಗಿ ವಿಫಲವಾಗಿ ಬಿದ್ದಿದ್ದರು.

ಈ ವೇಳೆ, ಭಾರಿ ಶಬ್ದ ಬಂದಿದೆ. ಶಬ್ದ ಬಂದ ಕಡೆ ಹರೀಶ್ ಹಾಗೂ ಮಂಜಪ್ಪ ಏನಾಯ್ತು ಅಂತ ನೋಡಲು ಹೋದಾಗ, ರಮೇಶ್ ರವರು ಪುನಃ ನೇಣು ಹಾಕಿ ಕೊಂಡು ಒದ್ದಾಡುತ್ತಿದ್ದರು. ಇದನ್ನು ಕಂಡು ರಮೇಶ್​ ಅವರನ್ನು ಕೆಳಗೆ ಇಳಿಸಿ ತಕ್ಷಣ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಇವರ ಈ ಕಾರ್ಯಕ್ಕೆ ಸಾಗರದ ಜನತೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇಂದು ಎಸ್ಪಿ ಶಾಂತರಾಜು, ತಮ್ಮ ಕಚೇರಿಗೆ ಕರೆಯಿಸಿ ಹರೀಶ್ ಅವರಿಗೆ 2 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಿದ್ದಾರೆ.

ABOUT THE AUTHOR

...view details