ಶಿವಮೊಗ್ಗ: ಅಸ್ಲಾಂ ಎಂಬಾತನನ್ನು ಹಿಡಿಯಲು ಹೋದಾಗ ಆತ ನಮ್ಮ ಸಿಬ್ಬಂದಿ ಮೇಲೆ ಚಾಕುವಿನಿಂದ ಹಲ್ಲೆಗೆ ಮುಂದಾದ. ನಮ್ಮ ಸಿಬ್ಬಂದಿ ರಕ್ಷಣೆಗಾಗಿ ಗುಂಡು ಹಾರಿಸಲಾಯಿತು ಎಂದು ಎಸ್ಪಿ ಮಿಥುನ್ ಕುಮಾರ್ ತಿಳಿಸಿದರು.
ಅಕ್ಟೋಬರ್ 30 ರಂದು ಶಿವಮೊಗ್ಗದ ಬಿ.ಹೆಚ್.ರಸ್ತೆಯ ರಾಯಲ್ ಆರ್ಕಿಡ್ ಮುಂಭಾಗ ಅಶೋಕ್ ಪ್ರಭು ಎಂಬಾತನ ಮೇಲೆ ಅಸ್ಲಾಂ ಹಲ್ಲೆ ನಡೆಸಿದ್ದ. ಇದರಿಂದ ಅಶೋಕ ಪ್ರಭು ಗಾಯಗೊಂಡಿದ್ದರು. ಪ್ರಕರಣದಲ್ಲಿ ಇಬ್ಬರು ಯುವಕರು, ಇಬ್ಬರು ಅಪ್ರಾಪ್ತರು ಭಾಗಿಯಾಗಿದ್ದರು. ಈಗಾಗಲೇ, ಸಾಗರದ ಆಸೀಫ್ ಎಂಬಾತನನ್ನು ಬಂಧಿಸಲಾಗಿದೆ.
ಇನ್ನೋರ್ವ ಆರೋಪಿ ಅಸ್ಲಾಂ ಶಿವಮೊಗ್ಗ ಹೊರ ವಲಯ ಪುರಲೆ ಬಳಿಯ ನೂತನ ಲೇಔಟ್ನಲ್ಲಿ ಇರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆ ದೊಡ್ಡಪೇಟೆಯ ಪಿಎಸ್ಐ ವಸಂತ ಕುಮಾರ್ ತಮ್ಮ ಸಿಬ್ಬಂದಿ ಜೊತೆ ಬಂಧಿಸಲು ಹೋದಾಗ, ಆರೋಪಿಯು ರಮೇಶ್ ಎಂಬ ಕಾನ್ಸ್ಟೇಬಲ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ, ಪರಾರಿಯಾಗಲು ಯತ್ನಿಸಿದ್ದಾನೆ.