ಕರ್ನಾಟಕ

karnataka

ETV Bharat / state

ಹುಚ್ಚುನಾಯಿಗಳ ನಿಯಂತ್ರಣಕ್ಕೆ ವಿದ್ಯುತ್​ ತಂತಿ ಅಳವಡಿಕೆ, ತಾನೇ ಹಾಕಿದ ತಂತಿಗೆ ವ್ಯಕ್ತಿ ಬಲಿ - ವಿದ್ಯುತ್ ಸ್ಪರ್ಶಿಸಿ ವ್ಯಕ್ತಿ ಸಾವು

ಹುಚ್ಚು‌ ನಾಯಿಗಳು ತನ್ನ ಮನೆಯೊಳಗೆ ಬರುತ್ತವೆ ಎಂದು ವ್ಯಕ್ತಿಯೊಬ್ಬರು ತಮ್ಮ ಮನೆಯ ಮುಂದಿನ ಬೇಲಿಗೆ ರಾತ್ರಿ ವೇಳೆ ವಿದ್ಯುತ್ ಹರಿಸುತ್ತಿದ್ದರು. ದುರಾದೃಷ್ಟವಶಾತ್ ಅದೇ ವಿದ್ಯುತ್ ತಂತಿಯನ್ನು ತುಳಿದು ಅವರು ಸಾವನ್ನಪ್ಪಿದ್ದಾರೆ.

Man died by current shock
Man died by current shock

By

Published : Aug 30, 2020, 9:46 PM IST

Updated : Aug 31, 2020, 6:43 AM IST

ಹುಚ್ಚುನಾಯಿಗಳ ನಿಯಂತ್ರಣಕ್ಕೆ ವಿದ್ಯುತ್​ ತಂತಿ ಅಳವಡಿಕೆ, ತಾನೇ ಹಾಕಿದ ತಂತಿಗೆ ವ್ಯಕ್ತಿ ಬಲಿ

ಶಿವಮೊಗ್ಗ: ಹುಚ್ಚು ನಾಯಿಗಳ ಕಾಟಕ್ಕೆ ತಡೆಯಾಗಿ ಹಾಕಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ಸೊರಬದಲ್ಲಿ ನಡೆದಿದೆ.

ಇಲ್ಲಿನ ಕಾನಕೇರಿಯಲ್ಲಿ ಹುಚ್ಚು ನಾಯಿಯ ಕಾಟ ಜಾಸ್ತಿಯಾಗಿದೆ. ಹೀಗಾಗಿ ನಾಯಿಗಳು ಮನೆಯೊಳಗೆ ಬರುತ್ತವೆ ಎಂದು ಮನೆಯೊಂದರ ಮಾಲೀಕ ಪುಟ್ಟಪ್ಪ ಮನೆಯ ಮುಂದಿನ ಬೇಲಿಗೆ ರಾತ್ರಿ ವೇಳೆ ವಿದ್ಯುತ್ ಹರಿಸುತ್ತಿದ್ದರು.

ನಿನ್ನೆ ರಾತ್ರಿ ಇವರು ಮೂತ್ರ ವಿಸರ್ಜನೆಗೆ ಹೋದಾಗ ಅದೇ ವಿದ್ಯುತ್ ತಂತಿ ತುಳಿದು ಸಾವನ್ನಪ್ಪಿದ್ದಾರೆ. ತನ್ನದೇ ಎಡವಟ್ಟಿಗೆ ಪುಟ್ಟಪ್ಪ ಬಲಿಯಾಗಿದ್ದು ಮಾತ್ರ ದುರಂತ.

ಈ ಕುರಿತು ಪುತ್ರ ರಾಕೇಶ್, ಸೊರಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸೊರಬ ಪಟ್ಟಣದಲ್ಲಿ ಹುಚ್ಚುನಾಯಿಗಳನ್ನು ಹಿಡಿಯಬೇಕಾದ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ ವಹಿಸಿದೆ ಎಂಬ ಆರೋಪಗಳು ಕೇಳಿ ಬಂದಿವೆ.

Last Updated : Aug 31, 2020, 6:43 AM IST

ABOUT THE AUTHOR

...view details