ಕರ್ನಾಟಕ

karnataka

ETV Bharat / state

ಶಿವಮೊಗ್ಗದಲ್ಲಿ ಸೂರ್ಯಗ್ರಹಣ.. ಮೌಢ್ಯ ತೊರೆಯಲು ಮಂಡಕ್ಕಿ, ಬೋಂಡಾ ಸೇವನೆ - ಸೂರ್ಯಗ್ರಹಣ

ಶಿವಮೊಗ್ಗದ ಫ್ರೀಡಂ ಪಾರ್ಕ್ ನಲ್ಲಿ ರಾಜ್ಯ ವಿಜ್ಞಾನ ಪರಿಷತ್ ವತಿಯಿಂದ ಸೂರ್ಯಗ್ರಹಣ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಜೊತೆಗೆ ಗ್ರಹಣದ ಸಂದರ್ಭದಲ್ಲಿ ಖಾರ ಮಂಡಕ್ಕಿ ಮತ್ತು ಬೋಂಡಾ ತಿನ್ನುವ ಮೂಲಕ ಗ್ರಹಣ ವೀಕ್ಷಿಸಿದರು.

solar-eclipse-viewing-in-shimoga
ಸೂರ್ಯಗ್ರಹಣ : ಮೌಢ್ಯ ತೊರೆಯಲು ಮಂಡಕ್ಕಿ, ಬೋಂಡಾ ಸೇವನೆ

By

Published : Oct 25, 2022, 7:55 PM IST

ಶಿವಮೊಗ್ಗ: 27 ವರ್ಷದ ನಂತರ ಖಗ್ರಾಸ ಸೂರ್ಯಗ್ರಹಣ ಸಂಭವಿಸಿದೆ. ಈ ಸೂರ್ಯಗ್ರಹಣ ನಮ್ಮ ಕರ್ನಾಟಕದಲ್ಲಿ ಪೂರ್ಣ ಪ್ರಮಾಣದಲ್ಲಿ ಗೋಚರವಾಗದೆ ಇದ್ದರೂ ಸೌರಕಾಯದ ಕೌತುಕವನ್ನು ಶಿವಮೊಗ್ಗದಲ್ಲಿ ಜನತೆ ಕಣ್ತುಂಬಿಕೊಂಡರು.

ಸೂರ್ಯಗ್ರಹಣ ಸೌರ ಮಂಡಲದಲ್ಲಿ ನಡೆಯುವ ಕೌತುಕವಾಗಿದೆ. ಇದು ಸೂರ್ಯ, ಭೂಮಿ ಹಾಗೂ ಚಂದ್ರ‌ನ ನಡುವೆ ನಡೆಯುವ ಒಂದು ಸಹಜ ಪ್ರಕ್ರಿಯೆಯಾಗಿದೆ. ಗ್ರಹಣವನ್ನು ಕಣ್ತುಂಬಿಕೊಳ್ಳಲು ಶಿವಮೊಗ್ಗದ ಫ್ರೀಡಂ ಪಾರ್ಕ್ ನಲ್ಲಿ ರಾಜ್ಯ ವಿಜ್ಞಾನ ಪರಿಷತ್ ವ್ಯವಸ್ಥೆ ಮಾಡಿತ್ತು. ಜೊತೆಗೆ ಪರಿಷತ್ ವತಿಯಿಂದ ಗ್ರಹಣ ನೋಡಲು ದೂರದರ್ಶಕ ಮತ್ತು ಕನ್ನಡಕವನ್ನು ನೀಡಲಾಗಿತ್ತು. ಇದರಲ್ಲಿ ನಮ್ಮಲ್ಲಿ ಕಾಣುವ ಶೇ 15-20 ರಷ್ಟು ಗ್ರಹಣವನ್ನು ಜನರು ಸಂತಸಪಟ್ಟರು. ನಮ್ಮಲ್ಲಿ ಶೇ 20 ರಷ್ಟು ಮಾತ್ರ ಗ್ರಹಣ ಗೋಚರಿಸಿದೆ.

ಸೂರ್ಯಗ್ರಹಣ : ಮೌಢ್ಯ ತೊರೆಯಲು ಮಂಡಕ್ಕಿ, ಬೋಂಡಾ ಸೇವನೆ

ಖಾರ ಮಂಡಕ್ಕಿ, ಬೋಂಡಾ ತಿಂದು ಗ್ರಹಣ ವೀಕ್ಷಣೆ: ಸೂರ್ಯ ಗ್ರಹಣದ ಸಮಯದಲ್ಲಿ ಯಾವುದೇ ಆಹಾರವನ್ನು, ನೀರು ಸೇವಿಸಬಾರದು ಎಂದು ಅನೇಕ ಜ್ಯೋತಿಷಿಗಳು ಹೇಳುತ್ತಾರೆ. ಇದರ ವಿರುದ್ಧ ವಿಜ್ಞಾನ ಪರಿಷತ್ ಗ್ರಹಣ ಸಮಯದಲ್ಲಿ ಖಾರ ಮಂಡಕ್ಕಿ ಹಾಗೂ ಬೋಂಡಾ ಸೇವಿಸಿ ಗ್ರಹಣ ವೀಕ್ಷಣೆ ಮಾಡಿದರು.

ಈ ಗ್ರಹಣವನ್ನು ಖಗ್ರಾಸ ಗ್ರಹಣದ ಜೊತೆಗೆ ಸೂರ್ಯಾಸ್ತ ಗ್ರಹಣ ಎಂದು ಕರೆಯುತ್ತಾರೆ. ಕಾರಣ ಸೂರ್ಯ ಮುಳುಗುವ ಸಮಯದಲ್ಲೂ ಗ್ರಹಣ ಮುಂದುವರೆಯುವುದರಿಂದ ಸೂರ್ಯಾಸ್ತ ಗ್ರಹಣ ಎಂದು ಕರೆಯುತ್ತಾರೆ. ಇದು ಪ್ರಕೃತಿಯಲ್ಲಿ ನಡೆಯುವ ಅಪರೂಪದ ಒಂದು ಕೌತುಕವಾಗಿದೆ‌. ಇದರಿಂದ ಭೂಮಿಯಲ್ಲಿನ ಜೀವರಾಶಿಗಳಿಗೆ ಯಾವುದೇ ತೊಂದರೆ ಇಲ್ಲವೆಂದು ನಿವೃತ್ತ ವಿಜ್ಞಾನ ಉಪನ್ಯಾಸಕರಾದ ಶ್ರೀಪತಿ ಹೇಳಿದರು.

ಇದನ್ನೂ ಓದಿ :ವರ್ಷದ ಕೊನೆಯ ಸೂರ್ಯಗ್ರಹಣ: ದೇಶದ ಬಹುತೇಕ ಭಾಗಗಳಲ್ಲಿ ಗೋಚರ

ABOUT THE AUTHOR

...view details