ಕರ್ನಾಟಕ

karnataka

ETV Bharat / state

ಶಿವಮೊಗ್ಗದ ಜ್ಞಾನ-ವಿಜ್ಞಾನ ಪರಿಷತ್​ನಲ್ಲಿ ಸೂರ್ಯ ಗ್ರಹಣ ವೀಕ್ಷಿಸಿದ ಸಾರ್ವಜನಿಕರು - Shimoga Jnana Siddhanta Parishat

ಶಿವಮೊಗ್ಗದ ಡಿಸಿ ಕಾಂಪೌಂಡ್ ನ ನಿವೃತ್ತ ಸರ್ಕಾರಿ ನೌಕರರ ಸಂಘದ ಮೇಲೆ ಸೂರ್ಯ ಗ್ರಹಣ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು. ಹಾಗೆಯೇ, ಗ್ರಹಣವನ್ನು ವೀಕ್ಷಿಸುವವರಿಗೆ ಸೌರ ಕನ್ನಡಕ ನೀಡಲಾಗಿತ್ತು.

Solar eclipse view
ಜ್ಞಾನ ವಿಜ್ಞಾನ ಪರಿಷತ್ ​ವತಿಯಿಂದ ಸೂರ್ಯ ಗ್ರಹಣ ವೀಕ್ಷಣೆಗೆ ಅವಕಾಶ

By

Published : Jun 21, 2020, 4:46 PM IST

ಶಿವಮೊಗ್ಗ: ಇಂದು ಜಿಲ್ಲೆಯ ಜ್ಞಾನ ವಿಜ್ಞಾನ ಪರಿಷತ್ ಹಾಗೂ ಗಾಂಧಿ ಬಸಪ್ಪ ಟ್ರಸ್ಟ್ ವತಿಯಿಂದ ಸೂರ್ಯ ಗ್ರಹಣ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು.

ನಗರದ ಡಿಸಿ ಕಾಂಪೌಂಡ್ ನ ನಿವೃತ್ತ ಸರ್ಕಾರಿ ನೌಕರರ ಸಂಘದ ಮೇಲೆ ಸೂರ್ಯ ಗ್ರಹಣ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಹಾಗೆಯೇ, ಗ್ರಹಣವನ್ನು ವೀಕ್ಷಿಸುವವರಿಗೆ ಸೌರ ಕನ್ನಡಕ ನೀಡಲಾಗಿತ್ತು. ಸೌರ ಕನ್ನಡದ ಮೂಲಕ ಕಂಕಣ ಸೂರ್ಯ ಗ್ರಹಣವನ್ನು ಸಾರ್ವಜನಿಕರು ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು. ಇದೇ ವೇಳೆ ಜ್ಞಾನ ವಿಜ್ಞಾನ ಪರಿಷತ್ ವತಿಯಿಂದ ಸೂರ್ಯಗ್ರಹಣ ಹೇಗೆ, ಏಕೆ ಸಂಭವಿಸುತ್ತದೆ ಎಂಬುದರ ಕುರಿತು ವಿವರಿಸಲಾಯಿತು.

ಸೂರ್ಯ‌ಗ್ರಹಣ ನಡೆಯುವಾಗ ನೀರು, ಆಹಾರ ಸೇವಿಸಬಾರದು ಎನ್ನಲಾಗುತ್ತೆ. ಆದರೆ, ಇದು ಕೇವಲ ಮೂಢನಂಬಿಕೆ ಎಂದು ತೋರಿಸಲು ಜ್ಞಾನ ವಿಜ್ಞಾನ ಹಾಗೂ ಗಾಂಧಿ ಬಸಪ್ಪ‌ ಟ್ರಸ್ಟ್ ನವರು ಸೂರ್ಯ ಗ್ರಹಣ ನೋಡುವವರಿಗೆ ಖಾರ ಮಂಡಕ್ಕಿ ಹಾಗೂ ಬಿಸ್ಕೆಟ್ ನೀಡಿದರು. ನೆರೆದಿದ್ದವರು ಗ್ರಹಣದ ವೇಳೆ ವಿತರಿಸಲಾದ ಖಾರ ಮಂಡಕ್ಕಿ‌ ತಿಂದು ಹಿಂದಿನಿಂದ ಬಂದ ಆಚರಣೆಗೆ ಪೂರ್ಣವಿರಾಮವಿಟ್ಟರು.

ದೇವಾಲಯಗಳಲ್ಲಿ ವಿಶೇಷ ಪೊಜೆ: ಸೂರ್ಯ ಗ್ರಹಣದ ಪ್ರಯುಕ್ತ ನಗರದ ಪ್ರಮುಖ ದೇವಾಲಯಗಳಲ್ಲಿ ವಿಶೇಷ ಪೊಜೆ ಹಾಗೂ ಹವನ ನಡೆಸಲಾಯಿತು. ನಗರದ ಶನೇಶ್ವರ ದೇವಾಲಯ ಹಾಗೂ ಸಿಗಂದೂರು ದೇವಾಲಯದಲ್ಲಿ ವಿಶೇಷ ಪೊಜೆ, ಹೋಮ ನಡೆಸಲಾಯಿತು.

ABOUT THE AUTHOR

...view details