ಕರ್ನಾಟಕ

karnataka

ETV Bharat / state

ಹಾವಿಗೆ ಮುತ್ತಿಡಲು ಹೋಗಿ ಕಚ್ಚಿಸಿಕೊಂಡ ಭದ್ರಾವತಿಯ ಸ್ನೇಕ್ ಮಾಸ್ಟರ್​​​ - ಈಟಿವಿ ಭಾರತ ಕನ್ನಡ

ಹಿಡಿದ ಹಾವಿಗೆ ಮುತ್ತಿಡಲು ಹೋಗಿ ವ್ಯಕ್ತಿಯೊಬ್ಬ ಹಾವಿನಿಂದ ತುಟಿಗೆ ಕಚ್ಚಿಸಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

snake-bite-at-bhadravati
ಹಾವಿಗೆ ಮುತ್ತಿಡಲು ಹೋಗಿ ಕಚ್ಚಿಸಿಕೊಂಡ ಭದ್ರಾವತಿಯ ಸ್ನೇಕ್ ಮಾಸ್ಟರ್​​​

By

Published : Sep 29, 2022, 10:52 PM IST

Updated : Sep 29, 2022, 10:59 PM IST

ಶಿವಮೊಗ್ಗ : ಹಿಡಿದ ಹಾವಿಗೆ ಮುತ್ತಿಡಲು ಹೋಗಿ ವ್ಯಕ್ತಿಯೊಬ್ಬ ಹಾವಿನಿಂದ ತುಟಿಗೆ ಕಚ್ಚಿಸಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಭದ್ರಾವತಿಯ ಅಲೆಕ್ಸ್ ಎಂಬಾತ ನಾಗರ ಹಾವನ್ನು ಹಿಡಿದು ಮುತ್ತಿಡುವಾಗ ಹಾವು ಏಕಾಏಕಿ ತಿರುಗಿ ಆತನ ತುಟಿಗೆ ಕಚ್ಚಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ಹಾವಿಗೆ ಮುತ್ತಿಡಲು ಹೋಗಿ ಕಚ್ಚಿಸಿಕೊಂಡ ಭದ್ರಾವತಿಯ ಸ್ನೇಕ್ ಮಾಸ್ಟರ್​​​

ಭದ್ರಾವತಿಯ ಅಲೆಕ್ಸ್ ಹಾಗೂ ರೋನಿ ಎಂಬವರು ಹಾವುಗಳನ್ನು ಸುರಕ್ಷಿತವಾಗಿ ಹಿಡಿದು ಸಂರಕ್ಷಣೆ ಮಾಡುತ್ತಿದ್ದರು. ಮೊನ್ನೆ ಭದ್ರಾವತಿಯ ಬೊಮ್ಮನಕಟ್ಟೆಯ ಮದುವೆ ಮನೆಯಲ್ಲಿ ಒಟ್ಟಿಗೆ ಎರಡು ನಾಗರ ಹಾವು ಕಾಣಿಸಿಕೊಂಡಿದೆ. ಈ ಎರಡು ಹಾವುಗಳನ್ನು ಹಿಡಿದಿದ್ದು, ಈ ವೇಳೆ ಒಂದು ಹಾವಿಗೆ ಗಾಯವಾಗಿದೆ.‌ ಈ ವೇಳೆ ಒಂದು ಹಾವಿಗೆ ಮುತ್ತಿಕ್ಕಲು ಹೋದಾಗ ಹಾವು ತಿರುಗಿ ಕಚ್ಚಿದೆ.

ಹಾವು ಕಚ್ಚಿದರೂ ಇವರು ಹಾವುಗಳನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟು ನಂತರ ಭದ್ರಾವತಿಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಬಂದು ದಾಖಲಾಗಿದ್ದು, ಸದ್ಯ ಚಿಕಿತ್ಸೆ ಪಡೆದು ಅಲೆಕ್ಸ್ ಮನೆಗೆ ವಾಪಸ್ ಆಗಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ :ಹಂಪಿಯಲ್ಲಿ ನಡೆಯುತ್ತಿತ್ತು ವೈಭವದ ನವರಾತ್ರಿ.. ಮೈಸೂರು ದಸರಾಕ್ಕೂ, ಇದಕ್ಕೂ ಇದೆ ನಂಟು !

Last Updated : Sep 29, 2022, 10:59 PM IST

ABOUT THE AUTHOR

...view details