ಶಿವಮೊಗ್ಗ: ನಗರದಲ್ಲಿನ ಸ್ಮಾರ್ಟ್ ಸಿಟಿ ಕಳಪೆ ಕಾಮಗಾರಿಗಳ ತನಿಖೆಗೆ ಆಗ್ರಹಿಸಿ ಪಾಲಿಕೆ ಆಯುಕ್ತರಿಗೆ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ಮನವಿ ಸಲ್ಲಿಸಿದರು.
ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕಳಪೆ ಕಾಮಗಾರಿ ಆರೋಪ: ತನಿಖೆಗೆ ಜಿಲ್ಲಾ ಯುವ ಕಾಂಗ್ರೆಸ್ ಆಗ್ರಹ - Smart city poor work
ಸ್ಮಾರ್ಟ್ ಸಿಟಿ ಕಾಮಗಾರಿಗಳು ಅವೈಜ್ಞಾನಿಕ, ಕಳಪೆಯಿಂದ ಕೂಡಿವೆ. ರಾತ್ರಿ ಹೊತ್ತು ಟಾರ್ಚ್‌ಹಿಡಿದು ಕಾಮಗಾರಿ ನಡೆಸುತ್ತಿದ್ದಾರೆ. ಕೂಡಲೇ ತನಿಖೆ ಮಾಡಿಸಿ, ಗುತ್ತಿಗೆದಾರನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
ಸ್ಮಾರ್ಟ್ ಸಿಟಿ ಕಾಮಗಾರಿಗಳು ಅವೈಜ್ಞಾನಿಕ, ಕಳಪೆಯಿಂದ ಕೂಡಿವೆ. ರಾತ್ರಿ ಹೊತ್ತು ಟಾರ್ಚ್‌ಹಿಡಿದು ಕಾಮಗಾರಿ ನಡೆಸುತ್ತಿದ್ದಾರೆ. ಕೂಡಲೇ ತನಿಖೆ ಮಾಡಿಸಿ, ಗುತ್ತಿಗೆದಾರನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಈ ಕಾಮಗಾರಿಗಳು ಗುಣಮಟ್ಟದಿಂದ ಕೂಡಿವೆಯೇ ಎಂಬ ಸಂಶಯ ಬರುತ್ತಿದೆ. ನಗರದ ಹೃದಯ ಭಾಗವಾದ ಸರ್ಕಿಟ್ ಹೌಸ್ ವೃತ್ತದಲ್ಲಿ ನಿನ್ನೆ ರಾತ್ರಿ ಡ್ರೈನೇಜ್ ಕಾಮಗಾರಿ ನಡೆಯುತ್ತಿದ್ದು, ಸಂಪೂರ್ಣ ವೃತ್ತದಲ್ಲಿ ಲೈಟ್ ಇಲ್ಲದ್ದರಿಂದ ಟಾರ್ಚ್ ಬಳಸಿ ಕಾಂಕ್ರೀಟ್ ಹಾಕುತ್ತಿರುವುದು ತುಂಬಾ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿದರು.
ಕೂಲಿ ಕೆಲಸಗಾರರು ಬಿಟ್ಟರೆ ಯಾರೊಬ್ಬ ಸ್ಮಾರ್ಟ್ ಸಿಟಿ ಎಂಜಿನಿಯರ್‌ಗಳಾಗಲಿ ಅಥವಾ ಗುತ್ತಿಗೆದಾರರಿಗೆ ಸಂಬಂಧಿಸಿದ ಸೈಟ್ ಎಂಜಿನಿಯರ್‌ಳಾಗಲಿ ಇಲ್ಲದೆ ಕೂಲಿ ಕಾರ್ಮಿಕರು ಕಾಂಕ್ರೀಟ್ ಹಾಕುತ್ತಿದ್ದಾರೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಸ್ಮಾರ್ಟ್ ಸಿಟಿ ಕಾಮಗಾರಿ ತುಂಬಾ ಅವೈಜ್ಞಾನಿಕವಾಗಿ ಕೂಡಿದ್ದು, ಗುತ್ತಿಗೆ ಪಡೆದ ಗುತ್ತಿಗೆದಾರನ್ನು ತುಂಡು ತುಂಡು ಗುತ್ತಿಗೆಯನ್ನು ನೀಡಿ ಇಡೀ ಸಂಪೂರ್ಣ ಸ್ಮಾರ್ಟ್ ಸಿಟಿ ಕಾಮಗಾರಿಯನ್ನೇ ಹಾಳು ಮಾಡುತ್ತಿರುವುದು ದುರಂತವೇ ಸರಿ. ಹಾಗಾಗಿ ತನಿಖೆ ಮಾಡಿಸಿ ಎಂದು ಮನವಿ ಸಲ್ಲಿಸಿದರು.