ಶಿವಮೊಗ್ಗ: ವಿಧಾನ ಪರಿಷತ್ ಉಪಸಭಾಪತಿ ಧರ್ಮೇಗೌಡರ ಮೃತದೇಹವನ್ನು ಶಿವಮೊಗ್ಗದ ಸಿಮ್ಸ್ ಶವಾಗಾರಕ್ಕೆ ತರಲಾಗಿದೆ.
ಸಂಬಂಧಿಕರು ಹಾಗು ಅಪ್ತ ಸಹಾಯಕ ನವೀನ್ ಅವರು ಕಡೂರು ತಾಲೂಕು ಆಸ್ಪತ್ರೆಯ ಆಂಬ್ಯುಲೆನ್ಸ್‌ನಲ್ಲಿ ಶವವನ್ನು ತಂದರು. ಸಿಮ್ಸ್‌ನ ಇಬ್ಬರು ಹಾಗೂ ಓರ್ವ ಸುಬ್ಬಯ್ಯ ಮೆಡಿಕಲ್ ಕಾಲೇಜಿನ ವೈದ್ಯರು ಶವ ಪರೀಕ್ಷೆಯಲ್ಲಿ ಭಾಗಿಯಾಗಲಿದ್ದಾರೆ. ಶವ ಪರೀಕ್ಷೆಗೆ ಸುಮಾರು ಮೂರು ತಾಸು ಬೇಕಾಗುತ್ತದೆ ಎಂದು ಸಿಮ್ಸ್ ಮೂಲಗಳು ತಿಳಿಸಿವೆ.