ಕರ್ನಾಟಕ

karnataka

ETV Bharat / state

ತಂಗಿಯ ಸಾವಿಗೆ ಪ್ರತೀಕಾರವಾಗಿ ಯುವಕನ ಕೊಲೆ: ಅಣ್ಣ ಸೇರಿ ಆರು ಆರೋಪಿಗಳ ಬಂಧನ - Shivamogga murder case

ಯುವಕನೊಬ್ಬನನ್ನು ಕೊಲೆ ಮಾಡಿದ್ದ ಆರು ಜನ ಆರೋಪಿಗಳನ್ನು ಶಿವಮೊಗ್ಗ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಓರ್ವ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ನಡೆಸಿದ್ದಾರೆ.

Six accused arrested after young man murder
ಕೊಲೆಗೀಡಾದ ವ್ಯಕ್ತಿ

By

Published : Dec 15, 2020, 10:26 PM IST

ಶಿವಮೊಗ್ಗ:ತಂಗಿಯ ಸಾವಿಗೆ ಕಾರಣನಾದ ಯುವಕನೋರ್ವನನ್ನು ಕೊಲೆ ಮಾಡಿ ಪ್ರತೀಕಾರ ತೀರಿಸಿಕೊಂಡಿದ್ದ ಮೃತ ತಂಗಿಯ ಅಣ್ಣ ಸೇರಿದಂತೆ ಒಟ್ಟು ಆರು ಜನ ಆರೋಪಿಗಳನ್ನು ಬಂಧಿಸಲಾಗಿದೆ. ಕಾರ್ತಿಕ್(24) ಕೊಲೆಗೀಡಾದ ಯುವಕ.

ಮೃತ ತಂಗಿಯ ಅಣ್ಣ ಸಂತೋಷ್​ ಸೇರಿದಂತೆ ಒಟ್ಟು ಆರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಓರ್ವನಿಗಾಗಿ ಶೋಧ ನಡೆಸಿದ್ದಾರೆ.

ಇದನ್ನೂ ಓದಿ:ಶಿವಮೊಗ್ಗ: ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ

ಟಿಪ್ಪುನಗರದ ನಿವಾಸಿಯಾದ ಕಾರ್ತಿಕ್, ವರ್ಷದ ಹಿಂದೆ ವಿದ್ಯಾನಗರದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ ಅನಾರೋಗ್ಯದಿಂದ ತಿಂಗಳಲ್ಲೇ ಆ ಯುವತಿ ನೇಣಿಗೆ ಶರಣಾಗಿದ್ದಳು. ಕಾರ್ತಿಕನ ಪ್ರೀತಿ ತಿಂಗಳಲ್ಲೇ ಅಂತ್ಯ ಕಂಡಿದ್ದರಿಂದ ಈತನ ಮನೆಯರು ಕೂಡ ಬೇರೆ ಮದುವೆ ಮಾಡಲು ತಯಾರಿ ಮಾಡಿಕೊಂಡಿದ್ದರಂತೆ. ಆದರೆ ಪ್ರಿಯತಮ ಕಾರ್ತಿಕ್​ನಿಂದಲೇ ತನ್ನ ತಂಗಿ ಮೃತಟ್ಟಿದ್ದಾಳೆಂದು ತಿಳಿದುಕೊಂಡಿದ್ದ ಮೃತ ತಂಗಿಯ ಅಣ್ಣ ಸಂತೋಷ್ ಅವನ ಕೊಲೆಗೆ ಸಂಚು ಹಾಕಿಕೊಂಡಿದ್ದ. ಅಂದುಕೊಂಡಂತೆ ತನ್ನ 6 ಜನ ಸ್ನೇಹಿತರೊಂದಿಗೆ ಕೆಇಬಿ ಕ್ವಾಟ್ರಸ್​​ ಹಿಂದೆ ಕೊಲೆ ಮಾಡಿ ಪರಾರಿಯಾಗಿದ್ದರು ಎನ್ನಲಾಗಿದೆ.

ಕೊಲೆಗೀಡಾದ ವ್ಯಕ್ತಿ

ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಮೃತ ಯುವಕನ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ತನಿಖೆ ವೇಳೆ ಇವರ ಕೃತ್ಯ ಇದೆ ಎಂದು ತಿಳಿದು ಬಂದಿದ್ದರಿಂದ ಆರು ಆರೋಪಿಗಳನ್ನು ಬಂಧಿಸಿದ್ದಾರೆ. ಕೊಲೆಗೀಡಾದ ಕಾರ್ತಿಕ್​ಗೆ ಮುಂದಿನ ತಿಂಗಳು ಮದುವೆ ಫಿಕ್ಸ್ ಆಗಿತ್ತು.

ABOUT THE AUTHOR

...view details