ಕರ್ನಾಟಕ

karnataka

ETV Bharat / state

ಮಾ. 31ರೊಳಗೆ ಶಿವಮೊಗ್ಗ ಡಿಸಿಸಿ ಬ್ಯಾಂಕ್​ಗೆ ಒಳಪಡುವ ಬ್ಯಾಂಕ್​ಗಳ ಗಣಕೀಕರಣ: ಮಂಜುನಾಥಗೌಡ - ಶಿವಮೊಗ್ಗ ಡಿಸಿಸಿ ಬ್ಯಾಂಕ್ ಸುದ್ದಿಗೋಷ್ಠಿ

ಶಿವಮೊಗ್ಗ ಡಿಸಿಸಿ ಬ್ಯಾಂಕ್ ತನ್ನದೇ ಆದ ಒಂದು ತಂತ್ರಾಂಶವನ್ನು ಪಡೆದು ಅದರ ಮೂಲಕ ಜಿಲ್ಲೆಯ ಎಲ್ಲಾ ಕೃಷಿ ಸಹಕಾರ ಸಂಘಗಳನ್ನು ಗಣಕೀಕರಣ ಮಾಡಿ‌ ಆನ್​​ಲೈನ್ ವ್ಯವಸ್ಥೆಯಡಿ ತರಲಾಗುವುದು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ತಿಳಿಸಿದ್ದಾರೆ.

press meet
ಸುದ್ದಿಗೋಷ್ಠಿ

By

Published : Dec 28, 2019, 7:18 PM IST

ಶಿವಮೊಗ್ಗ:ಡಿಸಿಸಿ ಬ್ಯಾಂಕ್ ವ್ಯಾಪ್ತಿಗೆ ಒಳಪಡುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್ ಸೇರಿದಂತೆ ಎಲ್ಲಾ ಬ್ಯಾಂಕ್​​ಗಳನ್ನು ಮಾರ್ಚ್ 31ರ ಒಳಗೆ ಸಂಪೂರ್ಣ ಗಣಕೀಕರಣ ಮಾಡಲಾಗುವುದು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ

ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ 2020ರ ಕ್ಯಾಲೆಂಡರ್, ಡೈರಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಶಿವಮೊಗ್ಗ ಡಿಸಿಸಿ ಬ್ಯಾಂಕ್ ತನ್ನದೇ ಆದ ಒಂದು ತಂತ್ರಾಂಶವನ್ನು ಪಡೆದು ಅದರ ಮೂಲಕ ಜಿಲ್ಲೆಯ ಎಲ್ಲಾ ಕೃಷಿ ಸಹಕಾರ ಸಂಘಗಳನ್ನು ಗಣಕೀಕರಣ ಮಾಡಿ‌ ಆನ್​​ಲೈನ್ ವ್ಯವಸ್ಥೆಯಡಿ ತರಲಾಗುವುದು ಎಂದರು. ಅಲ್ಲದೇ ತನ್ನ ಶಾಖೆಗಳನ್ನು‌ ಈಗಾಗಲೇ ಗಣಕೀಕರಣ ಮಾಡಿ, ಈಗ ತನ್ನ ವ್ಯಾಪ್ತಿಯ ಎಲ್ಲಾ ಬ್ಯಾಂಕ್​ಗಳನ್ನು ಗಣಕೀಕರಣ ಮಾಡಿದ ರಾಜ್ಯದ ಮೊದಲ ಡಿಸಿಸಿ ಬ್ಯಾಂಕ್ ಎಂಬ ಖ್ಯಾತಿಯನ್ನು ಪಡೆದುಕೊಳ್ಳಲಿದೆ ಎಂದರು.

ಈಗಾಗಲೇ ಸ್ಟಾಫ್ಟ್​​ವೇರ್ ಸಿದ್ಧಪಡಿಸಲು ಬ್ಯಾಂಕ್, ಸಹಕಾರ ಇಲಾಖೆ ಅಧಿಕಾರಿಗಳು, ನಿವೃತ್ತ ಅಧಿಕಾರಿಗಳ ಸಮಿತಿ ರಚನೆ ಮಾಡಲಾಗಿದೆ. ಸಮಿತಿಯ ಶಿಫಾರಸಿನ ಮೇಲೆ ಸಾಫ್ಟ್​​ವೇರ್ ಅಳವಡಿಸಿಕೊಳ್ಳಲಾಗುವುದು ಎಂದರು. ನಬಾರ್ಡ್ ಹಾಗೂ ಆರ್​ಬಿಐ ನಿರ್ದೇಶನದ ಮೇರೆಗೆ ಗಣಕೀಕರಣ ಮಾಡಲಾಗುತ್ತಿದೆ. ಗಣಕೀಕರಣವಾದ್ರೆ ಬ್ಯಾಂಕ್​ನ ಡೇಟಾ ಬೇಗನೆ ಲಭ್ಯವಾಗುತ್ತದೆ. ಹಿಂದೆಯೇ ಎಲ್ಲಾ ಬ್ಯಾಂಕ್​ಗಳನ್ನು ಗಣಕೀಕರಣ ಮಾಡಬೇಕು ಎಂದು ವೈದ್ಯನಾಥನ್ ವರದಿಯಲ್ಲಿ ತಿಳಿಸಲಾಗಿತ್ತು‌. ಅದರಂತೆ ಕಾರ್ಯನಿರ್ವಹಿಸಲಾಗುತ್ತಿದೆ ಎಂದರು.

ಡಿಸಿಸಿ ಬ್ಯಾಂಕ್‌ನಿಂದ ರಚಿಸಲ್ಪಟ್ಟ ಸ್ವ ಸಹಾಯ ಗುಂಪುಗಳು ಈಗ ತಮ್ಮ ಉಳಿತಾಯ ಹಣದಲ್ಲೇ ವ್ಯವಹಾರ ನಡೆಸುತ್ತಿವೆ. 1998ರಲ್ಲಿ 35 ಕೋಟಿ ವ್ಯಾವಹಾರ ನಡೆಸುತ್ತಿದ್ದ ಬ್ಯಾಂಕ್ ಈಗ 1,200 ಕೋಟಿ ರೂ. ವ್ಯವಹಾರ ನಡೆಸುತ್ತಿದೆ. ಇದರಿಂದ ಡಿಸಿಸಿ ಬ್ಯಾಂಕ್​​ನಿಂದ ರಿಯಾಯಿತಿ ದರದಲ್ಲಿ ಸಾಲ ಸೌಲಭ್ಯಗಳನನ್ನು ನೀಡಲಾಗುತ್ತಿದೆ. ರೈತರಿಗೆ ವಾಹನಗಳನ್ನು ಕೊಳ್ಳಲು ರಿಯಾಯಿತಿ ದರದಲ್ಲಿ ಸಾಲ ಸೌಲಭ್ಯ ನೀಡಲಾಗುತ್ತಿದೆ ಎಂದರು.‌ ಅಲ್ಲದೆ ಇ- ಆಟೋಗಳಿಗೂ ಉತ್ತೇಜನ ನೀಡುವ ಯೋಜನೆಗಳಿವೆ ಎಂದರು.

ABOUT THE AUTHOR

...view details