ಕರ್ನಾಟಕ

karnataka

ETV Bharat / state

ಸಂಬಳಕ್ಕಾಗಿ ಸಿಮ್ಸ್ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ - ಶಿವಮೊಗ್ಗ ವೈದ್ಯಕೀಯ ಮಹಾವಿದ್ಯಾಲಯ

ಹಾಲಿ ಹೊರಗುತ್ತಿಗೆ ನೌಕರರನ್ನೇ ಕಾಲೇಜು ಗುತ್ತಿಗೆದಾರರೆಂದು ಪರಿಗಣಿಸಿ, ಕಾಲೇಜಿನಿಂದಲೇ ಸಂಬಳ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.

shivamogga
ಸಂಬಳಕ್ಕಾಗಿ ಸಿಮ್ಸ್ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ  ನಡೆಸಿದರು.

By

Published : Dec 24, 2019, 7:17 PM IST

ಶಿವಮೊಗ್ಗ: ಶಿವಮೊಗ್ಗ ವೈದ್ಯಕೀಯ ಮಹಾವಿದ್ಯಾನಿಲಯದ ಹೊರಗುತ್ತಿಗೆ ನೌಕರರು ತಮಗೆ ಸಂಬಳ‌ ನೀಡಿ ಎಂದು ಆಗ್ರಹಿಸಿ ಕಾಲೇಜಿನ ಮುಂಭಾಗ ಪ್ರತಿಭಟನೆ ನಡೆಸಿದರು.

ಸಂಬಳಕ್ಕಾಗಿ ಸಿಮ್ಸ್ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ ನಡೆಸಿದರು.

ಸಿಮ್ಸ್ ಕಾಲೇಜಿನಲ್ಲಿ ಹೊರಗುತ್ತಿಗೆಯ ಮೇಲೆ ಸೆಕ್ಯೂರಿಟಿ, ಸ್ವೀಪರ್ ಹಾಗೂ ನರ್ಸ್​ಗಳು‌ ಸೇರಿ ಸುಮಾರು 500 ಜನ ನೌಕರರು ಹೊರಗುತ್ತಿಗೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೊರಗುತ್ತಿಗೆದಾರರು ಪ್ರತಿ ತಿಂಗಳು 5 ನೇ ತಾರಿಖಿನ ಒಳಗೆ ಸಂಬಳ ನೀಡಬೇಕು ಎಂಬ ನಿಯಮ ಇದ್ದರೂ ಸಹ ಇಂದಿನವರೆಗೂ ಈ ತಿಂಗಳ ಸಂಬಳವನ್ನು ಹಾಕಿಲ್ಲ. ಸಂಬಳವನ್ನೆ ನಂಬಿಕೊಂಡು ಜೀವನ ನಡೆಸುವವರು ಸಾಲ ಮಾಡಿ ಜೀವನ ನಡೆಸುವಂತೆ ಆಗಿದೆ. ಇದರಿಂದ ಸಮಯಕ್ಕೆ ಸರಿಯಾಗಿ ಸಂಬಳ ಹಾಕಬೇಕು. ಹಾಲಿ ಹೊರಗುತ್ತಿಗೆ ನೌಕರರನ್ನೇ ಕಾಲೇಜು ಗುತ್ತಿಗೆದಾರರೆಂದು ಪರಿಗಣಿಸಿ, ಕಾಲೇಜಿನಿಂದಲೇ ಸಂಬಳ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ಸ್ಥಳಕ್ಕೆ ವಿಧಾನಸಭೆ ಸದಸ್ಯ ಅಯನೂರು ಮಂಜುನಾಥ್ ಭೇಟಿ ನೀಡಿ, ಕಾರ್ಮಿಕ ಇಲಾಖೆಯ ಅಧಿಕಾರಿಗಳನ್ನು ಕರೆದು ಮಾತುಕತೆ ನಡೆಸಿದರು. ಹೊರಗುತ್ತಿಗೆಯ ಏಜೆನ್ಸಿಯವರು ಪ್ರತಿ ತಿಂಗಳು ಸರಿಯಾಗಿ ಕೆಲಸ ಮಾಡಿದ್ರು ಸಹ ಸಂಬಳವನ್ನು ಕಟ್ ಮಾಡಿ ಹಾಕುತ್ತಿದ್ದಾರೆ. ಇದು ಅಪರಾಧ. ಸಂಬಳ‌ ಸರಿಯಾಗಿ ಹಾಕದೆ, ಹಾಕುವ ಸಂಬಳದಲ್ಲಿ ಕಟ್ ಮಾಡಿ ನೌಕರರಿಗೆ ಶೋಷಣೆ ಮಾಡುತ್ತಿದ್ದಾರೆ. ಈ ಕುರಿತು ಅಧಿಕಾರಿಗಳು‌ ಸೂಕ್ತ ಕ್ರಮ ತೆಗೆದು ಕೊಳ್ಳಲಿದ್ದಾರೆ ಎಂದು ಎಂಎಸ್ಸಿ ಆಯನೂರು ಮಂಜುನಾಥ್ ತಿಳಿಸಿದ್ದಾರೆ.

ABOUT THE AUTHOR

...view details