ಶಿವಮೊಗ್ಗ: ದೇಶಾದ್ಯಂತ ಕೊರೊನಾ ಲಾಕ್ಡೌನ್ ಹಿನ್ನೆಲೆ, ನಟ ಧನುಗೌಡ ಶಿವಮೊಗ್ಗದಲ್ಲಿ ಸರಳ ವಿವಾಹ ಮಾಡಿಕೊಂಡಿದ್ದಾರೆ.
ಲಾಕ್ಡೌನ್ ಹಿನ್ನೆಲೆ: ನಟ ಧನುಗೌಡ ಸರಳ ವಿವಾಹ - ಸರಳ ವಿವಾಹ
ಲಾಕ್ಡೌನ್ ಹಿನ್ನೆಲೆ ನಟ ನಟ ಧನುಗೌಡ ಶಿವಮೊಗ್ಗದಲ್ಲಿ ಸರಳ ವಿವಾಹ ಮಾಡಿಕೊಂಡಿದ್ದಾರೆ. ವಿವಾಹದಲ್ಲಿ ಕುಟುಂಬಸ್ಥರು ಮಾತ್ರ ಭಾಗಿಯಾಗಿದ್ದಾರೆ.
mrg
ಹೊಂಬಣ್ಣ ಮತ್ತು ಪ್ರೇಮಂ ಸಿನಿಮಾಗಳಲ್ಲಿ ನಟಿಸಿರುವ ಧನುಗೌಡ, ಶಿವಮೊಗ್ಗದ ದಿ ಸೋಷಿಯಲ್ಸ್ ಆರ್ಬರ್ನಲ್ಲಿ ಸರಳ ವಿವಾಹವಾಗಿದ್ದಾರೆ. ಕನಕಪುರ ಸಾತನೂರು ಸಮೀಪದ ಕಚವನಹಳ್ಳಿ ಮೂಲದ ಧನುಗೌಡ, ಹಾವೇರಿ ಜಿಲ್ಲೆಯ ರಟ್ಟಿಹಳ್ಳಿಯ ರಾಣಿ ಎಂಬವರನ್ನು ವರಿಸಿದ್ದಾರೆ. ವಧು ರಾಣಿ 'ನೆನಪುಗಳು' ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಸರಳ ವಿವಾಹದಲ್ಲಿ ಕುಟುಂಬಸ್ಥರು ಮಾತ್ರ ಭಾಗಿಯಾಗಿದ್ದಾರೆ. ಈ ಮೊದಲು ದಾವಣಗೆರೆಯ ಬಕ್ಕೇಶ್ವರ ಕಲ್ಯಾಣ ಮಂಟಪದಲ್ಲಿ ವಿವಾಹ ನಿಗದಿಯಾಗಿತ್ತು. ಆದರೆ ಲಾಕ್ ಡೌನ್ ಹಿನ್ನೆಲೆ ನಟ-ನಟಿ ಶಿವಮೊಗ್ಗದಲ್ಲಿ ಸರಳ ವಿವಾಹ ಮಾಡಿಕೊಂಡಿದ್ದಾರೆ.