ಶಿವಮೊಗ್ಗ:ಪರ್ಯಾಯವಾಗಿ ನೀಡಿದಂತಹ ಜಮೀನನ್ನು ನಮ್ಮ ಸ್ವಾಧೀನಕ್ಕೆ ಕೊಡುವವರೆಗೂ ಧರಣಿ ಸತ್ಯಾಗ್ರಹ ಹೋರಾಟ ಕೈ ಬಿಡುವುದಿಲ್ಲ ಎಂದು ಶರಾವತಿ ಸಂತ್ರಸ್ತ ವೃದ್ಧ ದಂಪತಿ ಜಿಲ್ಲಾಧಿಕಾರಿ ಕಚೇರಿ ಎದುರು ಮೌನ ಪ್ರತಿಭಟನೆ ನಡೆಸಿದರು.
ಭದ್ರಾವತಿ ತಾಲೂಕಿನ ಕೆಂಚೇನಹಳ್ಳಿ ಗ್ರಾಮದ ಸೀತಾರಾಮ್ ಎಂಬುವವರ ಕುಟುಂಬ ಪ್ರತಿಭಟನೆ ನಡೆಸುತ್ತಿದ್ದು, ಶರಾವತಿ ಸಂತ್ರಸ್ತರಾದ ನಮಗೆ ಮುಳುಗಡೆ ಜಮೀನಿನ ಪರ್ಯಾಯವಾಗಿ ಸರ್ಕಾರ ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಹೋಬಳಿಯ ಎಮ್ಮೆದೊಡ್ಡಿ ಗ್ರಾಮದ ಸರ್ವೆ ನಂ 9ಎ ರಲ್ಲಿ 3 ಎಕರೆ ರೆವಿನ್ಯೂ ಭೂಮಿ ಸಾಗುವಳಿ ಚೀಟಿ ನೀಡಿ ಆದೇಶ ಹೊರಡಿಸಿತ್ತು. ಆದರೆ, ಈ ಜಮೀನಲ್ಲಿ ಸಾಗುವಳಿ ಮಾಡಲು ಹೋದರೆ ಅರಣ್ಯ ಇಲಾಖೆಯವರು ಜಮೀನು ಸಾಗುವಳಿ ಮಾಡಲು ಬಿಡುತ್ತಿಲ್ಲ. ಇದಕ್ಕಾಗಿ ಕಚೇರಿಗಳಿಗೆ ಅಲೆದೆಲೆದು ಸಾಕಾಗಿದೆ ಎಂದು ಅಳಲು ತೋಡಿಕೊಂಡರು.